7

ಶತಮಾನ ಕಂಡ ಸೀತಕಲ್ಲು ಶಾಲೆಯ ಅಭಿವೃದ್ಧಿ

Published:
Updated:
ಶತಮಾನ ಕಂಡ ಸೀತಕಲ್ಲು ಶಾಲೆಯ ಅಭಿವೃದ್ಧಿ

ತುಮಕೂರು: ‘ತಾಲ್ಲೂಕಿನ ಊರ್ಡಿಗೆರೆ ಹೋಬಳಿ ಸೀತಕಲ್ಲು ಗ್ರಾಮದಲ್ಲಿ 1900ನೇ ಸಾಲಿನಲ್ಲಿ ಸ್ಥಾಪಿತವಾಗಿರುವ ಕಿರಿಯ ಪ್ರಾಥಮಿಕ ಪಾಠಶಾಲೆಯು 117 ವರ್ಷ ಪೂರೈಸಿದ್ದು, ಈ ಶಾಲೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.

ಭಾರತ ಸರ್ಕಾರದ ಇಂಧನ ಇಲಾಖೆಯಡಿ ಬರುವ ಪವರ್ ಗ್ರಿಡ್ ವಿದ್ಯುತ್ ಕಂಪನಿಯು ತನ್ನ ಸಾಮಾಜಿಕ ಜವಾಬ್ದಾರಿ (ಸಿ.ಎಸ್.ಆರ್) ನಿಧಿಯಲ್ಲಿ ಈ ಶಾಲೆಯ ಅಭಿವೃದ್ದಿಗೆ ₹ 1 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಶಾಸಕ ಬಿ.ಸುರೇಶ್‌ಗೌಡ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ ಅಡಿಯಲ್ಲಿ ₹ 1 ಕೋಟಿ ನೀಡಲಾಗಿದೆ. ₹ 2 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲು ನೀಲ ನಕ್ಷೆ ತಯಾರಿಸಲಾಗಿದೆ ಎನ್ನುತ್ತಾರೆ ಬಿ.ಸುರೇಶ್‌ ಗೌಡ.

ಒಟ್ಟು 8 ಕೊಠಡಿಗಳನ್ನು ನೂತನವಾಗಿ ನಿರ್ಮಾಣ ಮಾಡಲಾಗುತ್ತಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿ ವರ್ಗಕ್ಕೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ ನಿರ್ಮಾಣ ಮಾಡಲಾಗುತ್ತಿದೆ.

ಕೊರಟಗೆರೆಯಿಂದಲೂ ಬರುತ್ತಾರೆ ವಿದ್ಯಾರ್ಥಿಗಳು: ಒಟ್ಟು ಶಾಲೆಯಲ್ಲಿ 136 ವಿದ್ಯಾರ್ಥಿಗಳಿದ್ದು, 70 ಹೆಣ್ಣು ಮಕ್ಕಳು ಮತ್ತು 66 ಗಂಡು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಭೋವಿಪಾಳ್ಯ, ಬೆಟ್ಟಸೀತಕಲ್ಲು, ದ್ಯಾಪೇನಹಳ್ಳಿ, ಸೀತಕಲ್ಲು, ಕಂತೇವಡೇರಹಳ್ಳಿ, ಸುಲ್ತಾನಿಹಳ್ಳಿಪಾಳ್ಯ ಮತ್ತು ಕೊರಟಗೆರೆ ತಾಲ್ಲೂಕಿನ ಮಲ್ಲಗೋನಹಳ್ಳಿಯ 20 ವಿದ್ಯಾರ್ಥಿಗಳು ಮತ್ತು ಬಿದರಗುಟ್ಟೆಯ 10 ಮಕ್ಕಳು ಸೀತಕಲ್ಲು ಶಾಲೆಗೆ ಪ್ರವೇಶ ಪಡೆದಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ್‌ ಮಾಹಿತಿ ನೀಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry