3

ಬೂಟಿನಿಂದ ಒದ್ದ ಎ.ಸಿ. ವಿರುದ್ಧ ಆರೋಪ: ಬಂಧನ

Published:
Updated:

ರಾಣೆಬೆನ್ನೂರು: ತಾಲ್ಲೂಕಿನ ಮುದೇನೂರು ಗ್ರಾಮದಲ್ಲಿ ರೈತ ಶಂಕರಗೌಡ ಗಂಗನಗೌಡ್ರನಿಗೆ ಉಪ ವಿಭಾಗಾಧಿಕಾರಿ (ಎ.ಸಿ.) ಪಿ.ಎನ್‌. ಲೊಕೇಶ್ ಕಾಲಿನಿಂದ ಒದ್ದಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದ್ದರೆ, ರೈತ ಶಂಕರಗೌಡ ಹಾಗೂ ಕೆಂಚನಗೌಡ ಬಸವನಗೌಡ್ರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಹಲಗೇರಿ ಪೊಲೀಸ್ ಠಾಣೆಯಲ್ಲಿ ಎ.ಸಿ. ಶನಿವಾರ ದೂರು ದಾಖಲಿಸಿದ್ದಾರೆ.

ಶಂಕರಗೌಡ ಚಂದ್ರಶೇಖರಗೌಡ ಗಂಗನಗೌಡ್ರ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲ ದಿನಗಳಿಂದ ಬಂದ್‌ ಆಗಿದ್ದ ಮುದೇನೂರು ಗ್ರಾಮದ ಮರಳು ದಾಸ್ತಾನು ಘಟಕವನ್ನು ಆರಂಭಿಸುವ ಸಲುವಾಗಿ ಉಪವಿಭಾಗಾಧಿಕಾರಿ ಲೋಕೇಶ ಬಂದಿದ್ದರು. ಆಗ, ಅವರನ್ನು ಪ್ರಶ್ನಿಸಿದ ರೈತ ಶಂಕರಗೌಡ ಚಂದ್ರಶೇಖರಗೌಡ ಗಂಗನಗೌಡ್ರ ಅವರಿಗೆ ಕಾಲಿನಿಂದ ಒದ್ದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದರು. ಅಲ್ಲದೇ, ಘೇರಾವ್ ಹಾಕಿ ಪ್ರತಿಭಟಿಸಿದ್ದರು.

ಸ್ಥಳಕ್ಕೆಬಂದ ಸರ್ಕಲ್‌ ಇನ್‌ಸ್ಪೆಕ್ಟರ್ ಮರುಳಸಿದ್ದಪ್ಪ ಹಾಗೂ ಸಬ್ ಇನ್‌ ಸ್ಪೆಕ್ಟರ್‌ ಶ್ರೀಶೈಲ ಚೌಗಲಾ ಗ್ರಾಮಸ್ಥರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

‘ನಾನು ಯಾರಿಗೂ ಒದ್ದಿಲ್ಲ, ನಾನೇಕೆ ಕ್ಷಮೆ ಕೇಳಲಿ’ ಎಂದು ಉಪ ವಿಭಾಗಾಧಿಕಾರಿ ಪಿ.ಎನ್. ಲೋಕೇಶ್ ಸ್ಥಳೀಯರ ದೂರನ್ನು ತಳ್ಳಿ ಹಾಕಿದ್ದಾರೆ.

ಶಂಕರಗೌಡ ಚಂದ್ರಶೇಖರಗೌಡ ಗಂಗನಗೌಡ್ರ, ಹನುಮಂತಪ್ಪ ಕಬ್ಬಾರ, ಈರಣ್ಣ ಮಾಕನೂರ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry