7

ಏಳು–ಬೀಳು; ಮುಗಿದ ಹದಿನೇಳು!

Published:
Updated:
ಏಳು–ಬೀಳು; ಮುಗಿದ ಹದಿನೇಳು!

ಜನವರಿ

* ಜ. 2 ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಗುರಿಯಾಗಿ, ನ್ಯಾಯಾಲಯದಿಂದ ಜಾಮೀನು ಪಡೆದು ಮರಳಿ ನ್ಯಾಯಾಲಯಕ್ಕೆ ಹಾಜರಾಗದೆ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಬಂಧಿಸಿದರು

* ಜ. 3 ನಗರದ ರಾಷ್ಟ್ರಪತಿ ಚೌಕ್ (ಜೇವರ್ಗಿ ಕ್ರಾಸ್) ಬಳಿಯ ಸ್ಟೇಟ್ ಬ್ಯಾಂಕ್‌ ಆಫ್ ಹೈದರಾಬಾದ್‌ನಲ್ಲಿ ಗೋಡೆಗೆ ಕಿಂಡಿ ಕೊರೆದು ಹಣ ದೋಚಲು ವಿಫಲ ಯತ್ನ ನಡೆಯಿತು

* ಜ. ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಜ.11ರಿಂದ 21ರ ವರೆಗೆ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪುರುಷರ ಫುಟ್‌ಬಾಲ್ ಟೂರ್ನಿ

* ಜ. ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ 21ರಿಂದ 23ರ ವರೆಗೆ ‘ಕನ್ನಡ ದಲಿತ ಸಾಹಿತ್ಯ’ ಕುರಿತು ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ

* ಜ. 16 ಈಶಾನ್ಯ ವಲಯದ ನೂತನ ಪೊಲೀಸ್ ಮಹಾನಿರ್ದೇಶಕ (ಐಜಿಪಿ)ರಾಗಿ ಅಲೋಕಕುಮಾರ್ ಅಧಿಕಾರ ಸ್ವೀಕರಿಸಿದರು

* ಜ. 21, 22ರಂದು ನಗರದ ಸೇಡಂ ರಸ್ತೆಯ ಹಾರಕೂಡ ಕಲ್ಯಾಣ ಮಂಟಪದಲ್ಲಿ ಬಿಜೆಪಿ 4ನೇ ರಾಜ್ಯ ಕಾರ್ಯಕಾರಿಣಿ

* ಜ. 22ರಂದು ತಾಲ್ಲೂಕಿನ ಕೆರಿ ಭೋಸಗಾ ಗ್ರಾಮದಲ್ಲಿರುವ ಕೆರೆಯ ಹೂಳು ಎತ್ತುವ ಮೂಲಕ ಕಲಬುರ್ಗಿಯಿಂದಲೇ ಬರಗಾಲ ನಿರ್ವಹಣೆ ಕಾಮಗಾರಿಗೆ ಯಡಿಯೂರಪ್ಪ ಚಾಲನೆ

ಫೆಬ್ರುವರಿ

* ಫೆ. 19 ತಾಲ್ಲೂಕಿನ ಕೋಟನೂರ ತಾಂಡಾದಲ್ಲಿ ವಿಜಯಕುಮಾರ್ ರಾಠೋಡ ಅವರು ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಕೊಲೆ ಮಾಡಿ ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡರು

* ಫೆ. 20 ರಾಜ್ಯ ಸರ್ಕಾರದ ಭ್ರಷ್ಟಾಚಾರ, ಹಗರಣಗಳ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ಮಾಡಿದರು

* ಫೆ. 24 ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರ ಬಂಧನಕ್ಕೆ ಸಂಬಂಧಿಸಿದಂತೆ ಗುಲಬರ್ಗಾ ವಿಶ್ವವಿದ್ಯಾಲಯ ಠಾಣೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಜಿ.ಎಸ್. ರಾಘವೇಂದ್ರ ಅಮಾನತು

* ಫೆ. 26 ತಾಲ್ಲೂಕಿನ ಕುಮಸಿ ಗ್ರಾಮದ ಕೆರೆಯಲ್ಲಿ ಈಜಲು ಹೋಗಿದ್ದ ಇಲ್ಲಿನ ಇಸ್ಲಾಮಾಬಾದ್ ಕಾಲೊನಿಯ ನಾಲ್ವರು ಮೃತಪಟ್ಟರು

* ಫೆ. 27 ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಸಮೀಪದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಬ್ಯಾಂಕ್‌ಗೆ ಆಕಸ್ಮಿಕ ಬೆಂಕಿ ತಗುಲಿ ಪೀಠೋಪಕರಣಗಳು ಭಸ್ಮ

ಮಾರ್ಚ್

* ಮಾ. 1 ಸುಪ್ರೀಂಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಮುಂದಾದ ಸಂಚಾರ ಠಾಣೆ ಪೊಲೀಸರು ನಗರದಲ್ಲಿ ಹೆಲ್ಮೆಟ್ ಧರಿಸದೇ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸಿದರು

* ಮಾ. 4 ಜಂಗಮಶ್ರೀ ಕಾವ್ಯನಾಮದಿಂದ ಖ್ಯಾತರಾಗಿದ್ದ ಹಿರಿಯ ನಾಟಕಕಾರ, ಉರ್ದು ಮತ್ತು ಕನ್ನಡ ಭಾಷಾ ಕವಿಗಳಾಗಿದ್ದ ರೇವಣಸಿದ್ದಯ್ಯ ರುದ್ರಸ್ವಾಮಿ ಮಠ (85) ನಿಧನ

* ಮಾ. 10 ಜಿಲ್ಲೆಯ ಆಳಂದ ತಾಲ್ಲೂಕು ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪತ್ರಕರ್ತ ಪಿ.ಸಾಯಿನಾಥ ಭಾಗಿ

* ಮಾ. 11 ಮದುವೆಯಾಗಿ ಕೈಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಳಂದ ತಾಲ್ಲೂಕು ಸರಸಂಬಾ ಗ್ರಾಮದ ಮಲ್ಲಯ್ಯ ಮುತ್ಯಾ ಆಶ್ರಮದ ಸ್ವಾಮೀಜಿ ಪ್ರಕಾಶ ಪುರಾಣಿಕ ಅವರನ್ನು ಇಲ್ಲಿನ ಓಂನಗರದ ಮನೆಯಲ್ಲಿ ಬಂಧಿಸಲಾಯಿತು

* ಮಾ. 17 ಕಲಬುರ್ಗಿಯ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ 195ನೇ ಜಾತ್ರಾ ಮಹೋತ್ಸವದ ಅಂಗವಾಗಿ ಅಪಾರ ಭಕ್ತ ಸಮೂಹದ ಜೈಘೋಷಗಳ ಮಧ್ಯೆ ಶ್ರೀ ಶರಣಬಸವೇಶ್ವರರ ರಥೋತ್ಸವವು ಅದ್ಧೂರಿಯಾಗಿ ನೆರವೇರಿತು

* ಮಾ. 18 ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ‘ಶಿವಶರಣೆ ಹೇಮರಡ್ಡಿ ಅಧ್ಯಯನ ಪೀಠ’ ಉದ್ಘಾಟನೆ

* ಮಾ. 25 ಜಗತ್ ವೃತ್ತದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಪ್ರಜ್ಞಾ ಕಾನೂನು ಸಲಹಾ ಸಮಿತಿಯಿಂದ ಮಧ್ಯರಾತ್ರಿ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಣೆ

ಏಪ್ರಿಲ್

* ಏ.11 ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ)ದ ಅಧ್ಯಕ್ಷರಾಗಿ ಮಹಮ್ಮದ್ ಅಸಗರ್ ಚುಲಬುಲ್ 2ನೇ ಅವಧಿಗೆ ನೇಮಕ

* ಏ. 13 ಕಲಬುರ್ಗಿ ಮಹಾನಗರ ಪಾಲಿಕೆಯ ನಾಲ್ಕನೇ ಅವಧಿಯ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ ಶರಣಕುಮಾರ ಮೋದಿ ಮತ್ತು ಉಪ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ ಪುತಲಿ ಬೇಗಂ ಆಯ್ಕೆ

* ಏ. 27 ನಗರದ ಯುನೈಟೆಡ್ ಆಸ್ಪತ್ರೆಯ ಕಟ್ಟಡದ ಮೊದಲನೇ ಮಹಡಿಯಲ್ಲಿರುವ ನ್ಯೂ ಲೈಫ್ ಲೈನ್ ಮಕ್ಕಳ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತು

* ಏ. 28 ಪ್ರಾದೇಶಿಕ ಆಯುಕ್ತರಾಗಿ ಹರ್ಷಗುಪ್ತ ಅಧಿಕಾರ ಸ್ವೀಕಾರ

ಮೇ

* ಮೇ 2 ರಾಷ್ಟ್ರಪತಿ ವೃತ್ತದಲ್ಲಿ ಮಂಗಳವಾರ ನೆಲಮಹಡಿ ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದರು

* ಮೇ 3 ಕಪನೂರು ಕೈಗಾರಿಕಾ ಪ್ರದೇಶದಲ್ಲಿರುವ ಭೀಮಾಶಂಕರ ಪಾಟೀಲ ಅವರಿಗೆ ಸೇರಿದ ಮಹಾಗಣೇಶ ದಾಲ್‌ ಮಿಲ್‌ನಲ್ಲಿ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ

* ಮೇ 7 ಈಶಾನ್ಯ ವಲಯದಿಂದ ಸುಧಾರಿತ ಗಸ್ತು ವ್ಯವಸ್ಥೆ ಸಮಾವೇಶ ಹಾಗೂ ಆರೋಗ್ಯ ತಪಾಸಣೆ ಚೀಟಿ ವ್ಯವಸ್ಥೆಗೆ ಚಾಲನೆ

* ಮೇ 7 ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳ ತಂಡದ ಸದಸ್ಯರು 10 ಬಾಲ್ಯ ವಿವಾಹಗಳನ್ನು ತಡೆದರು

* ಮೇ 22 ಜಿಲ್ಲೆಯ ಜೇವರ್ಗಿ ತಾಲ್ಲೂಕು ಮಂದೇವಾಲ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟರು

* ಮೇ 23 ಗೋವಾ ಹೋಟೆಲ್‌ ಬಳಿ ರೌಡಿ ಶೀಟರ್ ‘7ಸ್ಟಾರ್’ ಪ್ರದೀಪ್‌ ಗುಂಪಿಗೆ ಸೇರಿದವರು ಎನ್ನಲಾದ ಯುವಕರ ಗುಂಪೊಂದು ಕಾರಿನಲ್ಲಿ ಕುಳಿತಿದ್ದ ಮೂವರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

* ಮೇ 23 ಇಲ್ಲಿನ ಸೇಡಂ ರಸ್ತೆಯ ಗೀತಾ ನಗರ ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದು, ಪಲ್ಟಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟರು

* ಮೇ 27 ಇಲ್ಲಿನ ಇಂದಿರಾ ಸ್ಮಾರಕ ಭವನ (ಟೌನ್ ಹಾಲ್)ದ ಆವರಣದಲ್ಲಿ ಸ್ಥಾಪಿಸಲಾಗಿರುವ ಡಾ. ಬಾಬು ಜಗಜೀವನರಾಂ ಪುತ್ಥಳಿ ಅನಾವರಣ

ಜೂನ್

* ಜೂ. 3 ಜೇವರ್ಗಿ- ಶಹಾಬಾದ್‌ ರಸ್ತೆಯಲ್ಲಿ ಕಾರು ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಸೊಲ್ಲಾಪುರದ ಐರಡಗಿ ಮಠದ ಸ್ವಾಮೀಜಿ ಪುತ್ರ ಸಿದ್ದರಾಮ ಹಿರೇಮಠ (30) ಸಾವು

* ಜೂ. 5 ಗುಲಬರ್ಗಾ ವಿಶ್ವವಿದ್ಯಾಲಯ ಅಧೀನದ ಬಿ.ಇಡಿ ಕಾಲೇಜುಗಳ ದ್ವಿತೀಯ ಸೆಮಿಸ್ಟರ್ ಪ್ರಶ್ನೆ ಪತ್ರಿಕೆಯು ಪರೀಕ್ಷಾ ಮುನ್ನಾ ದಿನವೇ ವಾಟ್ಸ್‌ಆ್ಯಪ್‌ನಲ್ಲಿ ಬಹಿರಂಗ

* ಜೂ. 6 ಗುಲಬರ್ಗಾ ವಿಶ್ವವಿದ್ಯಾಲಯದ ಅಧೀನಕ್ಕೆ ಒಳಪಟ್ಟ ಬಿ.ಇಡಿ ಕಾಲೇಜುಗಳ ದ್ವಿತೀಯ ಸೆಮಿಸ್ಟರ್‌ನ ಪ್ರಶ್ನೆ ಪತ್ರಿಕೆ ಬಹಿರಂಗಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

* ಜೂ. 7 ಕಲಬುರ್ಗಿ ಹೊರವಲಯದ ಸೈಯದ್ ಚಿಂಚೋಳಿ ಕ್ರಾಸ್ ಬಳಿಯ ಕಲ್ಲು ಕ್ವಾರಿ ಪ್ರದೇಶದಲ್ಲಿ ಇಬ್ಬರು ಯುವಕರ ಕತ್ತು ಸೀಳಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

* ಜೂ. 10 ಜಿಲ್ಲೆಯ ಆಳಂದ ತಾಲ್ಲೂಕು ಜಿಡಗಾದ ಶ್ರೀ ಸಿದ್ದರಾಮೇಶ್ವರ ದೇವಸ್ಥಾನದಲ್ಲಿನ ಕಾಣಿಕೆಯ ಹುಂಡಿಯಲ್ಲಿದ್ದ ₹1.10 ಲಕ್ಷ ಹಾಗೂ ₹10.35 ಲಕ್ಷ ಮೌಲ್ಯದ ಸಿದ್ದಾರಾಮೇಶ್ವರ ಬೆಳ್ಳಿಯ ಮೂರ್ತಿ ಹಾಗೂ ಬೆಳ್ಳಿ-ಬಂಗಾರ ಮತ್ತು ಹಿತ್ತಾಳೆ ಪೂಜಾ ಸಾಮಗ್ರಿ ಕಳವು

* ಜೂ. 14 ಕಲಬುರ್ಗಿ ರಂಗಾಯಣ ನಿರ್ದೇಶಕರಾಗಿ ಹಿರಿಯ ಕಲಾವಿದ, ಬೀದರ್‌ನ ಮಹೇಶ ಎ.ಪಾಟೀಲ ನೇಮಕ

* ಜೂ. 16 ಪ್ರಾಧ್ಯಾಪಕರೊಬ್ಬರ ಮೇಲೆ ಹಲ್ಲೆ ಹಾಗೂ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಗುಲಬರ್ಗಾ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥ ಪ್ರೊ.ವಿ.ಆರ್‌. ಬಡಿಗೇರ ಹಾಗೂ ಪ್ರಾಧ್ಯಾಪಕ ಪ್ರೊ.ರಮೇಶ ರಾಠೋಡ ಬಂಧನ

* ಜೂ. 16 ಜೇವರ್ಗಿ ಕಾಲೊನಿಯ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಹದೇವ ಮಾನಕರೆ ಅವರ ಬಾಡಿಗೆ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳಿಂದ ದಾಳಿ

* ಜೂ. 16 ಚಿತ್ತಾಪುರ ತಾಲ್ಲೂಕು ಕಾಳಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ಗಣಿತ ಪ್ರಶ್ನೆ ಪತ್ರಿಕೆ ಬಹಿರಂಗ

* ಜೂ. 20 ನಗರದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಿರುವ ‘ಇ–ಶೌಚಾಲಯ’ ಲೋಕಾರ್ಪಣೆ

* ಜೂ. 21 ಜಿಲ್ಲೆಯ ಆಳಂದ ತಾಲ್ಲೂಕು ಜಿಡಗಾದ ಶ್ರೀ ಸಿದ್ದರಾಮೇಶ್ವರ ಮಠದಲ್ಲಿನ ದೇವರ ಬೆಳ್ಳಿಯ ಮೂರ್ತಿ, ಪೂಜಾ ಸಾಮಗ್ರಿ ಮತ್ತು ಹಿತ್ತಾಳೆ ಮೂರ್ತಿಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತರರಾಜ್ಯ ಕಳ್ಳರ ಬಂಧನ

* ಜೂ. 24 ಐದು ತಿಂಗಳಾದರೂ ರೈತರೊಬ್ಬರ ದೂರು ದಾಖಲಿಸಿಕೊಳ್ಳದ ಜೇವರ್ಗಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪ್ರದೀಪ ಎಸ್.ಭಿಸಗೆ ಅವರಿಗೆ ₹25 ಸಾವಿರ ದಂಡ ವಿಧಿಸಿದ ಕಲಬುರ್ಗಿ ಹೈಕೋರ್ಟ್‌

* ಜೂ. 24 ಐದು ಜನ ರೌಡಿಗಳ ಮೇಲೆ ಈಶಾನ್ಯ ವಲಯ ಪೊಲೀಸ್ ಮಹಾ ನಿರೀಕ್ಷಕ ಅಲೋಕಕುಮಾರ್ ಆದೇಶದಂತೆ ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್‌ ಕ್ರೈಂ ಆ್ಯಕ್ಟ್‌ – ಕೋಕಾ (KCOCA) ಕಾಯ್ದೆಯಡಿ ಪ್ರಕರಣ ದಾಖಲು

* ಜೂ. 27 ಆರು ವರ್ಷದ ಬಾಲಕ ಸೇಡಂ ರಸ್ತೆಯ ನಾಲೆಯಲ್ಲಿ ಕೊಚ್ಚಿ ಹೋಗಿ ಸಾವು

ಜುಲೈ

* ಜು. 3 ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಶಾಲಿಮಾರ್ ಡಿಜಿಟಲ್ ಆ್ಯಡ್ಸ್ ಅಂಗಡಿಯಲ್ಲಿ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ

* ಜು. 6 ಕಲಬುರ್ಗಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 51ರ ಶಹಾಬಾದ ಜೇವರ್ಗಿ ರಸ್ತೆ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಮೂವರು ಬೈಕ್ ಸವಾರರು ಸಾವು

* ಜು. 8 ‘ಕೋಕಾ’ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದ ರೌಡಿ ಶೀಟರ್‌ ಗ್ಯಾಂಗ್‌ನಿಂದ ನಂದೂರು ಗ್ರಾಮದ ಲಕ್ಷ್ಮಿಕಾಂತ ಕರದಳ್ಳಿ (35) ಅವರ ಕೊಲೆ

* ಜು. 11 ವೀರಶೈವ ಕಲ್ಯಾಣ ಮಂಟಪದ ಮುಂಭಾಗದಲ್ಲಿ ‘ಕಲಬುರ್ಗಿ ವಿಭಾಗ ಮಟ್ಟದ ಜನಪ್ರತಿನಿಧಿಗಳ ಸಮಾವೇಶ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ

* ಜು. 15 ನಗರದ ಸರಸ್ವತಿ ಗೋದಾಮು ಬಡಾವಣೆಯಲ್ಲಿನ ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರು ನೇಣು ಹಾಕಿಕೊಂಡು ಆತ್ಮಹತ್ಯೆ

* ಜು. 26 ಜಿಲ್ಲೆಯ ಆಳಂದ ತಾಲ್ಲೂಕು ಖಜೂರಿಯ ಸಿದ್ರಾಮಪ್ಪ ಬಂಡೆ ಅವರ ಮನೆಗೆ ನುಗ್ಗಿ, ವೃದ್ಧೆಯನ್ನು ಕೊಲೆ ಮಾಡಿ ಚಿನ್ನಾಭರಣ ಕಳವು ಮಾಡಿದ್ದ ಮೂವರು ಆರೋಪಿಗಳ ಬಂಧನ

* ಜು. 27 ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ನಿಧನ. ಹುಟ್ಟೂರು ನೆಲೋಗಿಯಲ್ಲಿ ಜು. 28ರಂದು ಅಂತ್ಯಕ್ರಿಯೆ

* ಜು. 29 ಕಲಬುರ್ಗಿ ಜಿಲ್ಲಾಧಿಕಾರಿಯಾಗಿ ಆರ್.ವೆಂಕಟೇಶ್‌ಕುಮಾರ್ ಅಧಿಕಾರ ಸ್ವೀಕಾರ

* ಜು. 29 ಸ್ವಾತಂತ್ರ ಹೋರಾಟಗಾರ ವಿದ್ಯಾಧರ ಗುರೂಜಿ ನಿಧನ

ಆಗಸ್ಟ್

* ಆ. 13 ಆಳಂದ ಪಟ್ಟಣದಲ್ಲಿ ₹110 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆ

* ಆ.24 ಚಿಂಚೋಳಿ ತಾಲ್ಲೂಕು ಹೊಸಳ್ಳಿಯ ಗದ್ದೆಯಲ್ಲಿ ಬೃಹತ್ ಗಾತ್ರದ ಪ್ಲ್ಯಾಸ್ಟಿಕ್‌ ಬಲೂನು ಪತ್ತೆ

* ಆ. 29 ಚಿತ್ತಾಪುರ ತಾಲ್ಲೂಕು ಭಂಕೂರ ಗ್ರಾಮದ ನರ್ಸ್‌ ಮನೆಯಲ್ಲಿ 14 ದಿನದ ಅವಳಿ ಜವಳಿ ನವಜಾತ ಶಿಶುಗಳು ಪತ್ತೆ

* ಆ. 31 ಸುಳ್ಳು ದಾಖಲಾತಿ, ತಹಶೀಲ್ದಾರ್ ಸೇರಿ ಮೂವರ ಅಮಾನತು

ಸೆಪ್ಟೆಂಬರ್

* ಸೆ. 6 ಎನ್‌ಇಕೆಆರ್‌ಟಿಸಿ ಅಧ್ಯಕ್ಷ ಇಲಿಯಾಸ್ ಭಾಗವಾನ್ ಮನೆ ಮೇಲೆ ಐಟಿ ದಾಳಿ

* ಸೆ. 10 ಇಲ್ಲಿನ ಡಾ. ಎಸ್.ಎಂ.ಪಂಡಿತ ರಂಗ ಮಂದರಿದಲ್ಲಿ ಶಾಸ್ತ್ರೀಯ ಸಂಗೀತ ಕಲಾವಿದೆ ಬೇಗಂ ಪರ್ವೀನ್‌ ಸುಲ್ತಾನ್‌ ಅವರಿಂದ ಸಂಗೀತ ಕಛೇರಿ

* ಸೆ. 11 ಗುಲಬರ್ಗಾ ವಿಶ್ವವಿದ್ಯಾಲಯದ 38ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸೆ. 11ರಿಂದ 13ರ ವರೆಗೆ ವಸ್ತು ಪ್ರದರ್ಶನ

* ಸೆ.19 ಮಾಜಿ ಸಚಿವ ಖಮರುಲ್‌ ಇಸ್ಲಾಂ ನಿಧನ

* ಸೆ. 24 ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಆಗ್ರಹಿಸಿ ಲಿಂಗಾಯತ ಸಮನ್ವಯ ಸಮಿತಿಯಿಂದ ಇಲ್ಲಿನ ನೂತನ ವಿದ್ಯಾಲಯ ಮೈದಾನದಲ್ಲಿ ಸಮಾವೇಶ

ಅಕ್ಟೋಬರ್

* ಅ. 7 ಜಿಲ್ಲಾಸ್ಪತ್ರೆ ಎಕ್ಸ್‌–ರೇ ಕೋಣೆಯಲ್ಲಿ ಹವಾನಿಯಂತ್ರಕ (ಎಸಿ)ದ ಸ್ಟೆಬ್ಲೈಜರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ಕು ಜನ ಗ್ರೂಪ್ ‘ಡಿ’ ಸಿಬ್ಬಂದಿ ಅಸ್ವಸ್ಥ

* ಅ. 8 ಆಳಂದ ರಸ್ತೆಯ ಡಬರಾಬಾದ್ ಆಶ್ರಯ ಕಾಲೊನಿ ಬಳಿ ಪೊಲೀಸರ ಮೇಲೆ ಇಬ್ಬರು ರೌಡಿ ಶೀಟರ್‌ಗಳಿಂದ ಹಲ್ಲೆ, ಆತ್ಮ ರಕ್ಷಣೆಗಾಗಿ ಪೊಲೀಸರಿಂದ ಗುಂಡಿನ ದಾಳಿ

* ಅ. 21 ಚಿತ್ತಾಪುರ ತಾಲ್ಲೂಕು ಶಹಾಬಾದ ಪಟ್ಟಣದ ಹಳೆ ಶಹಾಬಾದ ಕೋಟೆಯಲ್ಲಿರುವ ವಿವಾದಿತ ಸ್ಥಳದಲ್ಲಿ ಲಿಂಗ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನ ಆರೋಪಿಗಳ ಬಂಧನ

* ಅ. 30 ಮುಸ್ಲಿಂ ಯುವಕನ ಮೇಲೆ ನಡೆದ ಹಲ್ಲೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಶ್ರೀರಾಮ ಸೇನೆ ಕಾರ್ಯಾಧ್ಯಕ್ಷ ಹಾಗೂ ಜೇವರ್ಗಿ ತಾಲ್ಲೂಕು ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಬಂಧನ

ನವೆಂಬರ್

* ನ. 15 ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ (ಕೆಪಿಎಂಎ) ತಿದ್ದುಪಡಿ ಕೈಬಿಡುವಂತೆ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಜಿಲ್ಲಾ ಘಟಕದ ಸದಸ್ಯರು, ಖಾಸಗಿ ಆಸ್ಪತ್ರೆಗಳ ವೈದ್ಯರಿಂದ ಅನಿರ್ದಿಷ್ಟಾವಧಿ ಮುಷ್ಕರ

* ನ. 21 ತಾಲ್ಲೂಕಿನ ಅವರಾದ (ಬಿ) ಸಮೀಪ ಕ್ರೂಸರ್ ಮತ್ತು ಡೀಸೆಲ್ ಟ್ಯಾಂಕರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮದುವೆಗೆ ಹೊರಟಿದ್ದ ತಂದೆ-ಮಗ ಸೇರಿ ಐದು ಜನ ಸಾವು

* ನ. 21 ಹಿರಿಯ ಸಾಹಿತಿ ಸೂಗಯ್ಯ ಹಿರೇಮಠ (70) ಹೃದಯಾಘಾತದಿಂದ ನಿಧನ

* ನ. 22 ಜಿಲ್ಲೆಯ ಅಫಜಲಪುರ ತಾಲ್ಲೂಕು ಮಲ್ಲಾಬಾದ ಬಳಿ ಕಾರು ಮತ್ತು ಟಿಪ್ಪರ್ ಮಧ್ಯೆ ಡಿಕ್ಕಿ ಸಂಭವಿಸಿ ಇಬ್ಬರು ವಕೀಲರು ಸೇರಿ ಮೂವರು ಸಾವು

* ನ. 26 ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಪೊಲೀಸ್ ಭವನಕ್ಕೆ ಭೇಟಿ

* ನ. 30 ಜೇವರ್ಗಿಯಲ್ಲಿ ಅಡುಗೆಗೆ ಹೆಚ್ಚು ಎಣ್ಣೆ ಹಾಕಿದ್ದನ್ನು ಪ್ರಶ್ನಿಸಿ ಪತಿಯೊಬ್ಬರು ಕಾಯ್ದ ಎಣ್ಣೆಯನ್ನು ಪತ್ನಿಯ ಮುಖಕ್ಕೆ ಎರಚಿ, ಬಳಿಕ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ

ಡಿಸೆಂಬರ್

* ಡಿ. 2 ಕೆಸರಟಗಿ ಬಳಿ ಮೂವರು ದರೋಡೆ ಕೋರರಿಂದ ಪೊಲೀಸರ ಮೇಲೆ ಹಲ್ಲೆ, ಆತ್ಮ ರಕ್ಷಣೆಗಾಗಿ ಪೊಲೀಸರಿಂದ ಗುಂಡಿನ ದಾಳಿ

* ಡಿ. 11 ತಾಲ್ಲೂಕಿನ ಖಣದಾಳ ಗ್ರಾಮದ ನಿವಾಸಿ, ರಂಗ ನಿರ್ದೇಶಕ ಗುರುನಾಥ ಬಿ.ಹೂಗಾರಗೆ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ

* ಡಿ. 13 ಕೇಂದ್ರ ಕಾರಾಗೃಹದ 9 ಕೈದಿಗಳಿಗೆ ಬಿಡುಗಡೆ ಭಾಗ್ಯ

* ಡಿ. 13 ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಬಿ.ಮಲ್ಲಪ್ಪ ಅವರ ನಿವಾಸ ಹಾಗೂ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳಿಂದ ದಾಳಿ

* ಡಿ. 15 ತಾಲ್ಲೂಕಿನ ತಾವರಗೇರಾ ಬಳಿ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ರೌಡಿ ಶೀಟರ್‌ವೊಬ್ಬರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು, ಪೊಲೀಸರು ಗುಂಡಿನ ದಾಳಿ ನಡೆಸಿದರು

* ಡಿ.15 ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು ಅದಲು–ಬದಲು

* ಡಿ.26 ಸೇಡಂ ರಸ್ತೆಯ ವಾತ್ಸಲ್ಯ ಆಸ್ಪತ್ರೆಯ ಒಳ ರೋಗಿಯೊಬ್ಬರು ಆಸ್ಪತ್ರೆಯ ಮೊದಲ ಮಹಡಿಯಿಂದ ಜಿಗಿದು ಪರಾರಿ

* ಡಿ.29 ಜೇವರ್ಗಿಯ ಸುಧಾಕರ್ ಮೋರಟಗಿ ಸೆಲ್ಫಿ ವಿಡಿಯೋ ಮಾಡಿಕೊಂಡು, ಸ್ನೇಹಿತರ ಮೊಬೈಲ್‌ಗೆ ಕಳುಹಿಸಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry