ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

103 ವರ್ಷದ ಬಳಿಕ ಜಲಾಂತರ್ಗಾಮಿ ಪತ್ತೆ

Last Updated 31 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಮೊದಲನೇ ಜಾಗತಿಕ ಸಮರದ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಆಸ್ಟ್ರೇಲಿಯಾದ ಜಲಾಂತರ್ಗಾಮಿಯನ್ನು 103 ವರ್ಷಗಳ ಬಳಿಕ ಪತ್ತೆ ಮಾಡಲಾಗಿದೆ.

ಪಪುವಾ ನ್ಯೂಗಿನಿಯ ಡ್ಯೂಕ್ ಆಫ್ ಯಾರ್ಕ್‌ ದ್ವೀಪದಲ್ಲಿ ಒಂದು ಸಾವಿರ ಅಡಿ ಆಳದಲ್ಲಿ ‘ಎಚ್‌ಎಂಎಎಸ್‌ ಎಇ1’ ನೌಕೆ ಪತ್ತೆ ಹಚ್ಚಲಾಗಿದೆ.

ಸೆಪ್ಟೆಂಬರ್‌ 14, 1914ರಂದು ಪಪುವಾ ನ್ಯೂಗಿನಿಯ ರಬಾಲ್‌ ಎಂಬಲ್ಲಿ ಈ ಜಲಾಂತರ್ಗಾಮಿ ನಾಪತ್ತೆಯಾಗಿತ್ತು. ಇದರಲ್ಲಿ ಇದ್ದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ 35 ಮಂದಿ ಮೃತಪಟ್ಟಿದ್ದರು.

ಮೊದಲ ಜಾಗತಿಕ ಸಮರದಲ್ಲಿ ನಾಪತ್ತೆಯಾದ ಆಸ್ಟ್ರೇಲಿಯಾದ ಮೊದಲ ಜಲಾಂತರ್ಗಾಮಿ ಇದಾಗಿತ್ತು. ಸಮುದ್ರದ ತಳಭಾಗವನ್ನು ಪರಿಶೀಲಿಸಲು ವಿಜ್ಞಾನಿಗಳು ಡ್ರೋನ್‌ ವಿಮಾನ ಮತ್ತು ಬಹು ಆಯಾಮದ ಪ್ರತಿಧ್ವನಿಸುವ ಧ್ವನಿವರ್ಧಕಗಳನ್ನು ಬಳಸಿದ್ದರು.

‘ಫರ್ಗೊ ಈಕ್ವೇಟರ್‌’ ಎಂಬ ಶೋಧನಾ ಉಪಕರಣ ಈ ಜಲಾಂತರ್ಗಾಮಿಯನ್ನು ಮೊದಲು ಪತ್ತೆ ಹಚ್ಚಿತು. ನಂತರ ಅದರಲ್ಲಿ ಮೃತಪಟ್ಟವರಿಗೆ ಗೌರವ ನಮನ ಸಲ್ಲಿಸಲಾಯಿತು ಎಂದು ‘ಲೈವ್‌ ಸೈನ್ಸ್‌’ ನಿಯತಕಾಲಿಕ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT