7

33 ಭಾರತೀಯರಿಗೆ ಹೊಸ ವರ್ಷದ ಗೌರವ

Published:
Updated:
33 ಭಾರತೀಯರಿಗೆ ಹೊಸ ವರ್ಷದ ಗೌರವ

ಲಂಡನ್: ಬ್ರಿಟನ್‌ಗೆ ಕೊಡುಗೆ ನೀಡಿದವರಿಗೆ ರಾಣಿ ಎಲಿಜಬೆತ್ ಸಲ್ಲಿಸುವ ಹೊಸ ವರ್ಷದ ಗೌರವ ಪಟ್ಟಿಯಲ್ಲಿ ಭಾರತದ 33 ಮಂದಿ ಇದ್ದಾರೆ.

ಯಾರ್ಕ್ ವಿಶ್ವವಿದ್ಯಾಲಯದ ಎಲೆಕ್ಟ್ರಾನ್ ಮೈಕ್ರೊಸ್ಕೋಪ್ ವಿಭಾಗದ ಮುಖ್ಯಸ್ಥೆ ಪ್ರೊ. ಪ್ರತಿಭಾ ಲಕ್ಷ್ಮಣ್ ಗಾಯ್ ಅವರು ರಸಾಯನವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆಗೆ ಡೇಮ್‌ಹುಡ್ ಗೌರವ ಸಲ್ಲಿಸಲಾಗಿದೆ.

ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ ಪ್ರಶಸ್ತಿಗೆ 9 ಜನರು, ಮೆಂಬರ್ಸ್ ಆಫ್ ದಿ ಬ್ರಿಟಿಷ್ ಎಂಪೈರ್‌ಗೆ 16 ಜನರು ಹಾಗೂ ಬ್ರಿಟಿಷ್ ಎಂಪೈರ್ ಮೆಡಲ್ಸ್‌ಗೆ 7 ಜನರು ಆಯ್ಕೆಯಾಗಿದ್ದಾರೆ.‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry