7

ಬಣ್ಣ ಬಯಲು!

Published:
Updated:

ಪರಿವರ್ತನಾ ರ‍್ಯಾಲಿ, ಜಾಗೃತಿ ಸಮಾವೇಶ, ಸಮತೆಯ ಕರ್ನಾಟಕ... ಹೀಗೆ ಹಲವಾರು ‘ಹಗಲು ವೇಷ’ ಧರಿಸಿ ನಟಿಸುತ್ತಿರುವ ರಾಜಕೀಯ ಪಕ್ಷಗಳ ಬಣ್ಣ ಈಗ ಮಹದಾಯಿ ಹೋರಾಟದಿಂದ ಬಯಲಾಗುತ್ತಿರುವುದು ಆಶ್ಚರ್ಯವೇನಲ್ಲ.

ಯುವಕರು, ವೃದ್ಧರು, ಮಹಿಳೆಯರು, ಮಕ್ಕಳು ಹಗಲು– ರಾತ್ರಿ– ಚಳಿಯೆನ್ನದೆ ನೂರಾರು ಕಿಲೋಮೀಟರ್‌ ದೂರದಿಂದ ಬಂದು, ತಮ್ಮ ನಾಡಿನ ನಾಳೆಯ ಹಿತಕ್ಕಾಗಿ ರಾಜಕೀಯ ಪಕ್ಷಗಳ ಮುಖಂಡರ ಮನೆಮುಂದೆ ರೋದಿಸಿದರು. ಸೌಜನ್ಯ ಮತ್ತುಮಾನವೀಯತೆಯಿಂದಲಾದರೂ ಅವರ ಬಳಿ ಸುಳಿದು ಅವರ ಸಮಸ್ಯೆ ಬಗೆಹರಿಸುವವ್ಯವಧಾನ, ಪ್ರಾಮಾಣಿಕ ಪ್ರಯತ್ನ ಯಾವುದೇ ರಾಜಕೀಯ ಪಕ್ಷದಲ್ಲಿ ಕಾಣದೇ ಇರುವುದು ಇಂದಿನ ದುರಂತ.

ರಾಜಕೀಯ ಪಕ್ಷಗಳ ನಾಟಕವನ್ನು ಸಾಮಾನ್ಯ ಜನರು ಇನ್ನಾದರೂ ಅರಿಯಬೇಕಿದೆ. ಹಣ, ಹೆಂಡ, ಮಾಂಸದ ತುಂಡುಗಳಿಗೆ ಯಾರೂ ತಮ್ಮ ವೋಟು ಮಾರಿಕೊಳ್ಳಬಾರದು. ಎಚ್ಚೆತ್ತು ಮತ ಚಲಾಯಿಸಬೇಕಿದೆ. ಇಲ್ಲದಿದ್ದರೆ ಇದಕ್ಕಿಂತಲೂ ಹೆಚ್ಚಿನ ದಂಡ ತೆರಬೇಕಾಗುತ್ತದೆ.

–ಕಿಕ್ಕೇರಿ ಎಂ. ಚಂದ್ರಶೇಖರ್ ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry