ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಟಲ್‌ ಪಿಂಚಣಿಗೆ ಆಧಾರ್‌: ಹೊಸ ಅರ್ಜಿ

Last Updated 31 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಫಲಾನುಭವಿಗಳ ಒಪ್ಪಿಗೆ ಪಡೆದು, ಅಟಲ್ ಪಿಂಚಣಿ ಯೋಜನೆಗೆ (ಎಪಿವೈ) ಆಧಾರ್ ಸಂಪರ್ಕಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಪಿಎಫ್‌ಆರ್‌ಡಿಎ) ಮುಂದಾಗಿದೆ.

ಇದಕ್ಕಾಗಿ ಜನವರಿ 1ರಿಂದ ಪರಿಷ್ಕೃತ ಅರ್ಜಿ ನಮೂನೆಯನ್ನೇ ಬಳಸುವಂತೆ ಸೇವೆಯನ್ನು ಒದಗಿಸುವ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಹಣಕಾಸು ಸೇವೆಗಳ ಇಲಾಖೆ ಹಾಗೂ ಪಿಂಚಣಿ ಸೇವೆ ಒದಗಿಸುವ ಸಂಸ್ಥೆಗಳ ಸಲಹೆ ಪಡೆದು ಈ  ಅರ್ಜಿ ನಮೂನೆ ಸಿದ್ಧಪಡಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಆಧಾರ್‌ ಕಾಯ್ದೆಯ ಅನ್ವಯ ಎಪಿವೈ ಪಡೆಯಲು ಅರ್ಹರಾಗಿರುವ ಪ್ರತಿಯೊಬ್ಬರೂ ಆಧಾರ್‌ ಮಾಹಿತಿಯನ್ನು ನೀಡಬೇಕು. ಪಿಂಚಣಿದಾರರ ಆಧಾರ್‌ ಮಾಹಿತಿ ಪಡೆದ ಬಳಿಕ ಸೇವಾದಾತ ಸಂಸ್ಥೆಗಳು ಅದನ್ನು ‘ಕೇಂದ್ರೀಯ ದಾಖಲೆ ಸಂಗ್ರಹ ಸಂಸ್ಥೆಯ’ ಜಾಲತಾಣಕ್ಕೆ ಅಪ್ಲೋಡ್‌ ಮಾಡಬೇಕು.

ಬ್ಯಾಂಕ್‌ ಅಥವಾ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ಹೊಂದಿರುವವರು ಎಪಿವೈ ಖಾತೆ ತೆರೆಯಬಹುದು. 60 ವರ್ಷವಾದ ಬಳಿಕ ತಿಂಗಳಿಗೆ
ಕನಿಷ್ಠ ₹ 1,000 ದಿಂದ ಗರಿಷ್ಠ ₹5,000ದವರೆಗೆ ಪಿಂಚಣಿ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT