7

ಷೇರುಪೇಟೆ ವಹಿವಾಟಿನ ಮೇಲೆ ತ್ರೈಮಾಸಿಕದ ಪ್ರಭಾವ ನಿರೀಕ್ಷೆ

Published:
Updated:
ಷೇರುಪೇಟೆ ವಹಿವಾಟಿನ ಮೇಲೆ ತ್ರೈಮಾಸಿಕದ ಪ್ರಭಾವ ನಿರೀಕ್ಷೆ

ನವದೆಹಲಿ: ಕಂಪೆನಿಗಳ ಮೂರನೇ ತ್ರೈಮಾಸಿಕ ಫಲಿತಾಂಶ ಮತ್ತು ಡಿಸೆಂಬರ್ ತಿಂಗಳ ವಾಹನ ಮಾರಾಟ ಪ್ರಗತಿಯ ಮೇಲೆ ಹೊಸ ವರ್ಷದ ಮೊದಲ ವಾರದ ವಹಿವಾಟು ನಿರ್ಧಾರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎರಡನೇ ತ್ರೈಮಾಸಿಕದಲ್ಲಿ ಕಂಪೆನಿಗಳ ಆರ್ಥಿಕ ಸಾಧನೆ ಮಾರುಕಟ್ಟೆ ನಿರೀಕ್ಷೆಯಂತೆ ಇರಲಿಲ್ಲ. ಹೀಗಾಗಿ ಹೂಡಿಕೆದಾರರು ಈ ಬಾರಿ ತ್ರೈಮಾಸಿಕ ಫಲಿತಾಂಶ ಬಗ್ಗೆ ಹೆಚ್ಚು ಕುತೂಹಲ ತಳೆದಿದ್ದಾರೆ.

‘ಮುಂಬರುವ ಕೇಂದ್ರ ಬಜೆಟ್‌ ಮತ್ತು ಆರ್ಥಿಕ ಸುಧಾರಣಾ ಕ್ರಮಗಳು ಷೇರು ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳಲ್ಲಿ ಹೂಡಿಕೆ ಪ್ರಮಾಣವನ್ನು ನಿರ್ಧರಿಸಲಿವೆ. ಬಂಡವಾಳ ವೆಚ್ಚದಲ್ಲಿ ಚೇತರಿಕೆ ಕಂಡುಬಂದರೆ ಮಾರುಕಟ್ಟೆ ಸ್ಥಿತಿ ಇನ್ನಷ್ಟು ಸುಧಾರಿಸಲಿದೆ’ ಎಂದು ಜಿಯೋಜಿತ್ ಫೈನಾನ್ಸಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್‌ ಹೇಳಿದ್ದಾರೆ.

ತಯಾರಿಕೆ ಮತ್ತು ಸೇವಾ ವಲಯದ ಪ್ರಗತಿಯನ್ನು ಸೂಚಿಸುವ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) ಈ ವಾರವೇ ಹೊರಬೀಳಲಿವೆ. ಇದು ಮಾರುಕಟ್ಟೆಯ ಮುಂದಿನ ನಡೆಯನ್ನು ನಿರ್ಧರಿಸಲಿವೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಳಿತ ಮತ್ತು ಅಮೆರಿಕದ ಫೆಡರಲ್ ರಿಸರ್ವ್‌ ಬ್ಯಾಂಕ್‌ನ ಬಡ್ಡಿದರ ಪರಾಮರ್ಶೆ ನಿರ್ಧಾರಗಳು ದೇಶಿ ಷೇರುಪೇಟೆಯ ವಹಿವಾಟಿನ ಮೇಲೆ ಪ್ರಭಾವ ಬೀರಲಿವೆ. 2017ರಲ್ಲಿ ಸಂವೇದಿ ಸೂಚ್ಯಂಕ 7,430 ಅಂಶ (ಶೇ 28) ಏರಿಕೆ ದಾಖಲಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry