ಸುಳ್ಯ: 13ರಂದು ಸಾಹಿತ್ಯ ಸಮ್ಮೇಳನ– ವಿವಿಧ ಸ್ಪರ್ಧೆ

7

ಸುಳ್ಯ: 13ರಂದು ಸಾಹಿತ್ಯ ಸಮ್ಮೇಳನ– ವಿವಿಧ ಸ್ಪರ್ಧೆ

Published:
Updated:

ಸುಳ್ಯ: ಇಲ್ಲಿನ ತಾಲ್ಲೂಕು ಸಾಹಿತ್ಯ ಪರಿಷತ್ ಸ್ವಾಗತ ಸಮಿತಿ, ಕೊಯಿಕುಳಿ ಮಿತ್ರ ಯುವಕ ಮಂಡಲ ಹಾಗೂ ಕುರಲ್ ತುಳು ಕೂಟದ ಆಶ್ರಯದಲ್ಲಿ ಇದೇ 13ರಂದು ದುಗಲಡ್ಕದಲ್ಲಿ ನಡೆಯಲ್ಲಿರುವ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಾಹಿತ್ಯ ಸ್ಪರ್ಧೆಗಳು ಭಾನುವಾರ ಸುಳ್ಯ ಚೆನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ನಡೆದವು.

ತಾಲ್ಲೂಕು ಪರಿಷತ್‌ನ ಸದಸ್ಯ ಗಣೇಶ್ ಭಟ್ ಉದ್ಘಾಟಿಸಿದರು. ಗೌರವ ಕಾರ್ಯದರ್ಶಿ ಚಂದ್ರಶೇಖರ ಪೇರಾಲು ಹಾರೈಸಿದರು. ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ, ಸ್ಪರ್ಧಾ ಸಮಿತಿ ಅಧ್ಯಕ್ಷ ಶಶಿಧರ ಎಂ.ಜೆ., ಸದಸ್ಯರಾದ ಮಮತಾ ಮೂಡಿತ್ತಾಯ, ಚಂದ್ರಾವತಿ, ಸ್ವಾಗತ ಸಮಿತಿ ಕಾರ್ಯದರ್ಶಿ ಜಯರಾಮ ಶೆಟ್ಟಿ ಕೆ.ಎಸ್., ಪ್ರಚಾರ ಸಮಿತಿ ಅಧ್ಯಕ್ಷ ರಮೇಶ್ ನೀರಬಿದರೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry