ಕುಡಿತದಿಂದ ಕುಟುಂಬ ನಾಶ

7

ಕುಡಿತದಿಂದ ಕುಟುಂಬ ನಾಶ

Published:
Updated:

ಕನಕಪುರ: ಕುಡಿತವು ಮನುಷ್ಯನ ಜತೆಗೆ ಆತನ ಕುಟುಂಬವನ್ನು ಸರ್ವ ನಾಶ ಮಾಡುತ್ತದೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ನಿರ್ದೇಶಕ ಮೋಹನ್‌ಕುಮಾರ್‌ ಹೇಳಿದರು.

ಕರ್ನಾಟಕ ಮದ್ಯಪಾನ ಸಂಯಮ  ಮಂಡಳಿ ವತಿಯಿಂದ ಬರಡನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಬೀದಿನಾಟಕ ಕಾರ್ಯಕ್ರಮದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿ, ಮದ್ಯಪಾನ ಮಾಡುವುದರಿಂದ ಮನುಷ್ಯನ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಲಿದೆ, ಅತಿಯಾದ ಮದ್ಯಸೇವನೆಯಿಂದ ಕರಳು, ಕಿಡ್ನಿ, ಲಿವರ್‌, ಹೃದಯ

,ಮೆದುಳಿಗೂ ಸಮಸ್ಯೆಯಾಗುವ, ಅಪಾಯವಾಗುವ ಸಾಧ್ಯತೆಯಿದೆ ಎಂದರು.

ನಿರ್ದೇಶಕ ಬೂದುಗುಪ್ಪೆ ಮರಿಯಪ್ಪ ಮಾತನಾಡಿ, ಮನುಷ್ಯರು ಕುಡಿತದ ಚಟಕ್ಕೆ  ಸಹಜವಾಗಿ ಒಳಗಾಗುತ್ತಾರೆ. ಚಟಕ್ಕೆ ಬಿದ್ದವರು ಸುಲಭವಾಗಿ ಕುಡಿತಬಿಡುವುದಿಲ್ಲ, ಮನೆಯಲ್ಲಿ ಹಣ ಇಲ್ಲದಿದ್ದರೂ ಸಾಲ ಮಾಡಿ ಕುಡಿಯುತ್ತಾರೆ ಎಂದರು.

ಕುಡಿತದಿಂದ ಕುಟುಂಬದ ನೆಮ್ಮದಿ ಹಾಳಾಗುತ್ತದೆ, ಮಕ್ಕಳ ವಿದ್ಯಾಭ್ಯಾಸ ಭವಿಷ್ಯ ನಾಶವಾಗುತ್ತದೆ ಎಂದು ಎಚ್ಚರಿಸಿದರು.

ಕುಡಿತವನ್ನು ಬಿಡಿಸಲು ಮತ್ತು ಅದರಿಂದ ಆಗುವ ಪರಿಣಾಮ ತಿಳಿಸಲುಸಂಯಮ ಮಂಡಳಿ ಬೀದಿ ನಾಟಕದ ಕಾರ್ಯಕ್ರಮ ನಡೆಸುತ್ತಿದೆ. ತಾಲ್ಲೂಕಿನ ಬರಡನಹಳ್ಳಿ, ಬೂದುಗುಪ್ಪೆ, ಕೊಳ್ಳಿಗನಹಳ್ಳಿ, ಹಾರೋಹಳ್ಳಿ, ಮರಳವಾಡಿ, ಕಲ್ಲಹಳ್ಳಿ, ಭೈರಮಂಗಲ ಗ್ರಾಮದಲ್ಲಿ ಬೀದಿ ನಾಟಕ ಮಾಡಲಾಯಿತು ಎಂದರು. ಮಹಿಳೆಯರು ಮನೆಯಲ್ಲಿ ಕುಡಿಯುವವರನ್ನು ಸರಿದಾರಿಗೆ ತರಬೇಕು. ತಮ್ಮ ಕುಟುಂಬ ಕಾಪಾಡಿಕೊಳ್ಳಬೇ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry