ಮಲ್ಪೆ, ಪಡುಕರೆ ಬೀಚ್‌: ಅಭಿವೃದ್ದಿಗೆ ಕೈ ಜೋಡಿಸಿ

7
ಉಡುಪಿ ಪರ್ಬ ಸಮಾರೋಪ: ಸಚಿವ ಪ್ರಮೋದ್

ಮಲ್ಪೆ, ಪಡುಕರೆ ಬೀಚ್‌: ಅಭಿವೃದ್ದಿಗೆ ಕೈ ಜೋಡಿಸಿ

Published:
Updated:

ಉಡುಪಿ: ‘ಮಲ್ಪೆ ಹಾಗೂ ಪಡುಕರೆ ಬೀಚ್‌ನ್ನು ಜಗತ್ತಿನ ಪ್ರೇಕ್ಷಣೀಯ ಪ್ರವಾಸೋದ್ಯಮ ಕೇಂದ್ರವಾಗಿಸಲು ಪ್ರತಿಯೊಬ್ಬರು ಕೈ ಜೋಡಿಸ ಬೇಕು’ ಎಂದು ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ ಬೆಂಗಳೂರು, ಉಡುಪಿ ನಿರ್ಮಿತಿ ಕೇಂದ್ರ ಭಾನುವಾರ ಆಯೋಜಿಸಿದ ‘ಉಡುಪಿ ಪರ್ಬ’ ಹಾಗೂ ‘ಸಾಹಸ ಉತ್ಸವ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಾಹಸ ಕ್ರೀಡೆ ಬೆಳೆಸಿ ಪ್ರವಾಸೋದ್ಯ ಮವನ್ನು ಅಭಿವೃದ್ಧಿ ಪಡಿಸುವ ನಿರ್ಧಾರ ಮಾಡಲಾಗಿದೆ. ಉಡುಪಿ ಪರ್ಬದಲ್ಲಿ ಹತ್ತಾರು ಸಾಹಸ ಕ್ರೀಡೆಗಳನ್ನು ಆಯೋಜಿಸಿದ್ದು, ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ. ಇನ್ನಷ್ಟು ಅಭಿವೃದ್ಧಿ ಪಡಿಸುವ ಕೆಲಸ ಮಾಡಲಾಗುವುದೆಂದು ಭರವಸೆ ನೀಡಿದರು.

ಸರಿಗಮಪ ತಂಡದ ಸಂಗೀತ ಸಂಜೆ ಮುಗಿಯುತ್ತಿದ್ದಂತೆ ಡೈಯಲ್ ಮಂತ್ರದಿಂದ ನೂತನವಾಗಿ ಹೊಸ ವರ್ಷಾಚರಣೆಯನ್ನು ಸುಡುಮದ್ದು ಸುಡುವ ಮೂಲಕ ಸ್ವಾಗತಿಸಲಾಯಿತು.

ನಗರ ಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್, ಉಪನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಪೌರಾಯುಕ್ತ ಡಿ. ಮಂಜುನಾಥಯ್ಯ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry