ದೆಹಲಿಯಲ್ಲಿ ಹೊಸ ವರ್ಷಾಚರಣೆ; ಇಂಡಿಯಾ ಗೇಟ್‌ನತ್ತ ಲಕ್ಷಾಂತರ ಮಂದಿ, ಟ್ರಾಫಿಕ್‌ ಜಾಮ್

7

ದೆಹಲಿಯಲ್ಲಿ ಹೊಸ ವರ್ಷಾಚರಣೆ; ಇಂಡಿಯಾ ಗೇಟ್‌ನತ್ತ ಲಕ್ಷಾಂತರ ಮಂದಿ, ಟ್ರಾಫಿಕ್‌ ಜಾಮ್

Published:
Updated:
ದೆಹಲಿಯಲ್ಲಿ ಹೊಸ ವರ್ಷಾಚರಣೆ; ಇಂಡಿಯಾ ಗೇಟ್‌ನತ್ತ ಲಕ್ಷಾಂತರ ಮಂದಿ, ಟ್ರಾಫಿಕ್‌ ಜಾಮ್

ನವದೆಹಲಿ: ಹೊಸ ವರ್ಷ 2018ಕ್ಕೆ ಭಾನುವಾರ ತಡರಾತ್ರಿ ಅದ್ದೂರಿ ಸ್ವಾಗತ ಕೋರಿದ ಜನರು ಸಂಭ್ರಮ ವ್ಯಕ್ತಪಡಿಸಿದ್ದರು.

ವರ್ಷದ ಮೊದಲ ದಿನ ಸೋಮವಾರವನ್ನು ಮತ್ತಷ್ಟು ಸಂತಸ, ಸಂಭ್ರಮದಿಂದ ಕಳೆಯಲು ಜನರು ರಾಷ್ಟ್ರರಾಜಧಾನಿಯಲ್ಲಿನ ಇಂಡಿಯಾ ಗೇಟ್‌ ಬಳಿ ಲಕ್ಷಾಂತರ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.

ಇಂಡಿಯಾ ಗೇಟ್‌ನತ್ತ ಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿರುವುದರಿಂದ ಕಳೆದ ನಾಲ್ಕೈದು ತಾಸುಗಳಿಂದ ಸುತ್ತಲಿನ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.

ಮೊದಲ ದಿನದ ಸಂಭ್ರಮದಲ್ಲಿ ತೊಡಗಿರುವ ಜನ ಮೈ ಕೊರೆಯುವ ಚಳಿಯಲ್ಲೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ.

ಹೊಸ ವರ್ಷಾಚರಣೆ ನಿಮಿತ್ತ ಇಂಡಿಯಾ ಗೇಟ್‌ ಬಳಿ ಒಂದು ಲಕ್ಷದಷ್ಟು ಜನ ಸೇರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry