‘ಪಾಕ್‌ ಜೈಲುಗಳಲ್ಲಿ 457 ಭಾರತೀಯ ಕೈದಿಗಳು’

7

‘ಪಾಕ್‌ ಜೈಲುಗಳಲ್ಲಿ 457 ಭಾರತೀಯ ಕೈದಿಗಳು’

Published:
Updated:
‘ಪಾಕ್‌ ಜೈಲುಗಳಲ್ಲಿ 457 ಭಾರತೀಯ ಕೈದಿಗಳು’

ಇಸ್ಲಾಮಾಬಾದ್: ಇಲ್ಲಿನ ವಿವಿಧ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ 399 ಮೀನುಗಾರರು ಸೇರಿದಂತೆ ಒಟ್ಟು 457 ಭಾರತೀಯ ಕೈದಿಗಳ ಪಟ್ಟಿಯನ್ನು ಪಾಕಿಸ್ತಾನ ಸರ್ಕಾರ ಸೋಮವಾರ ಭಾರತೀಯ ಹೈಕಮಿಷನ್‌ಗೆ ನೀಡಿದೆ.

2008 ಮೇ 21ರಂದು ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಕೈದಿಗಳ ಪಟ್ಟಿಯನ್ನು ಭಾರತಕ್ಕೆ ನೀಡಲಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ತಿಳಿಸಿದೆ.

ಈ ಒಪ್ಪಂದದಂತೆ ವರ್ಷದಲ್ಲಿ ಎರಡು ಬಾರಿ (ಜನವರಿ 1ರಂದು ಹಾಗೂ ಜುಲೈ 1) ಎರಡೂ ದೇಶಗಳು ಪರಸ್ಪರ ಕೈದಿಗಳ ಪಟ್ಟಿಯನ್ನು ವರ್ಗಾಯಿಸಿಕೊಳ್ಳುತ್ತಿವೆ. ಜನವರಿ 8ರಂದು 146 ಮೀನುಗಾರರನ್ನು ಪಾಕಿಸ್ತಾನ ಬಿಡುಗಡೆ ಮಾಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry