ಅನಂತಕುಮಾರ್ ಹೆಗಡೆಗೆ ಎಚ್ಚರಿಕೆ: ಬಿಎಸ್‌ವೈ

7

ಅನಂತಕುಮಾರ್ ಹೆಗಡೆಗೆ ಎಚ್ಚರಿಕೆ: ಬಿಎಸ್‌ವೈ

Published:
Updated:
ಅನಂತಕುಮಾರ್ ಹೆಗಡೆಗೆ ಎಚ್ಚರಿಕೆ: ಬಿಎಸ್‌ವೈ

ತುಮಕೂರು: ‘ಸಂವಿಧಾನ ಬದಲಾಯಿಸಲು ಅಧಿಕಾರಕ್ಕೆ ಬಂದಿರುವುದಾಗಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನೀಡಿದ್ದ ಹೇಳಿಕೆ ಸರಿಯಲ್ಲ. ಜನರಿಗೆ ನೋವಾಗುವ ರೀತಿಯಲ್ಲಿ ಮಾತನಾಡಬಾರದು ಎಂದು ಸಚಿವರಿಗೆ ಹೇಳಿದ್ದೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸೋಮವಾರ ಕೈದಾಳದಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

’ಸಂಸತ್‌ನಲ್ಲಿ ಹೆಗಡೆ ಅವರು ಕ್ಷಮೆ ಕೋರಿದ್ದಾರೆ. ಈಗ ಅದು ಮುಗಿದ ಅಧ್ಯಾಯ. ಯಾವುದೇ ಉದ್ದೇಶದಿಂದ ಹೇಳಿದ್ದರೂ ಅವರ ಹೇಳಿಕೆ ಸರಿಯಲ್ಲ. ಹೆಗಡೆ ಹೇಳಿಕೆ ಬಗ್ಗೆ ಹಿರಿಯ ಮುಖಂಡ ಶ್ರೀನಿವಾಸ್ ಪ್ರಸಾದ್ ಅವರಿಗೂ ಅಸಮಾಧಾನವಾಗಿದೆ’ ಎಂದು ಹೇಳಿದರು.

’ಈ ರೀತಿ ಹೇಳಿಕೆ ನೀಡಬಾರದು ಎಂದು ಸಚಿವರಿಗೆ ನಾನು ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಎಚ್ಚರಿಕೆ ನೀಡಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry