ಡಿ.ಅನೂಪ್‌ಕುಮಾರ್ ನಿಧನ

7

ಡಿ.ಅನೂಪ್‌ಕುಮಾರ್ ನಿಧನ

Published:
Updated:
ಡಿ.ಅನೂಪ್‌ಕುಮಾರ್ ನಿಧನ

ನವದೆಹಲಿ: ಮೈಸೂರು ಮೂಲದ ಪತ್ರಕರ್ತ ಡಿ.ಅನೂಪ್‌ಕುಮಾರ್‌ (50) ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಸೋಮವಾರ ಬೆಳಗಿನ ಜಾವ ನಿಧನರಾಗಿದ್ದಾರೆ.

ಹೊಸ ವರ್ಷಾಚರಣೆ ಅಂಗವಾಗಿ ಮನಾಲಿ ಪ್ರವಾಸಕ್ಕೆ ತೆರಳಿದ್ದ ಇವರು ತೀವ್ರ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಮೈಸೂರಿನ ಸ್ಥಳೀಯ ಆಂಗ್ಲ ಪತ್ರಿಕೆ ಮೂಲಕ ವೃತ್ತಿಜೀವನ ಆರಂಭಿಸಿದ್ದ ಅನೂಪ್‌ಕುಮಾರ್‌, ವಿಕ್ರಾಂತ್‌ ಟೈರ್‌ ಕಾರ್ಮಿಕ ಸತ್ಯದೇವ್‌ ಕೊಲೆ ಪ್ರಕರಣಕ್ಕೆ ತಿರುವು ನೀಡುವ ನಿಟ್ಟಿನಲ್ಲಿ ವರದಿ ಮಾಡಿದ್ದರು. ಕಳೆದ 15 ವರ್ಷಗಳಿಂದ ದೆಹಲಿಯಲ್ಲಿ ಆಂಗ್ಲ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರಿಗೆ ತಾಯಿ, ಪತ್ನಿ ಹಾಗೂ ಪುತ್ರ ಇದ್ದಾರೆ.

ಇವರ ಅಗಲಿಕೆಯಿಂದ ತೀವ್ರ ಆಘಾತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಅಂತ್ಯಕ್ರಿಯೆಯು ಮಂಗಳವಾರ ಸಂಜೆ ಮೈಸೂರಿನಲ್ಲಿ ನಡೆಯಲಿದೆ. ಮಾಹಿತಿಗಾಗಿ ಮೊಬೈಲ್‌ ದೂರವಾಣಿ ಸಂಖ್ಯೆ 9880505479 ಮೂಲಕ ಕುಟುಂಬ ಸದಸ್ಯರನ್ನು ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry