ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಪಾಕ್ ಕ್ರಿಕೆಟ್ ಇಲ್ಲ

Last Updated 1 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಗಡಿಯಲ್ಲಿ ಗುಂಡಿನ ದಾಳಿ ಮತ್ತು ಭಯೋತ್ಪಾದನೆ ಕೃತ್ಯ ನಿಲ್ಲಿಸುವವರೆಗೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ದ್ವಿಪಕ್ಷೀಯ ಕ್ರಿಕೆಟ್‌ ಸರಣಿ ಸಾಧ್ಯವಿಲ್ಲ’ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಸೋಮವಾರ ವಿದೇಶಾಂಗ ವ್ಯವಹಾರಗಳ ಮೇಲಿನ ಸಂಸದೀಯ ಸಮಾಲೋಚನಾ ಸಮಿತಿ ಸಭೆಯಲ್ಲಿ ಈ ವಿಷಯ ಸ್ಪಷ್ಟಪಡಿಸಿದ್ದಾರೆ.

‘ತಟಸ್ಥ ತಾಣದಲ್ಲಿಯೂ ಉಭಯ ದೇಶಗಳ ನಡುವಣ ಸರಣಿ ಆಯೋಜನೆ ಕೂಡ ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ಕ್ರಿಕೆಟ್‌ ಜತೆ, ಜತೆಯಾಗಿ ಹೋಗಲು ಸಾಧ್ಯವಿಲ್ಲವೆಂದು ಸಚಿವರು  ಹೇಳಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.

‘ನೆರೆಯ ರಾಷ್ಟ್ರಗಳ ಜತೆ ಬಾಂಧವ್ಯ’ ಕುರಿತ ಚರ್ಚೆಯಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ.ಜೆ. ಅಕ್ಬರ್‌, ವಿದೇಶಾಂಗ ಕಾರ್ಯದರ್ಶಿ ಎಸ್‌. ಜೈಶಂಕರ್‌ ಭಾಗವಹಿಸಿದ್ದರು.

2007–08ರಲ್ಲಿ ಪಾಕಿಸ್ತಾನ ತಂಡದ ಎದುರಿನ ಸರಣಿಗೆ ಭಾರತವು ಆತಿಥ್ಯ ವಹಿಸಿತ್ತು. 2008ರಲ್ಲಿ ಮುಂಬೈ ಮೇಲಿನ ಭಯೋತ್ಪಾದನೆ ದಾಳಿಯ ನಂತರ ಉಭಯ ದೇಶಗಳ ನಡುವಣ ಯಾವುದೇ ಸರಣಿಗಳೂ ನಡೆದಿಲ್ಲ.

2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ತಂಡ ಪ್ರಯಾಣಿಸುತ್ತಿದ್ದ ಬಸ್‌ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಆ ನಂತರ ಬೇರೆ ದೇಶಗಳ ತಂಡಗಳು ಪಾಕ್ ಆತಿಥ್ಯದಲ್ಲಿ ಸರಣಿ ಆಡಲು ಒಪ್ಪಿರಲಿಲ್ಲ.

2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಭಾರತ, ಬಾಂಗ್ಲಾ ಮತ್ತು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗಳು ಜಂಟಿಯಾಗಿ ಆಯೋಜಿಸಬೇಕಿತ್ತು. ಆದರೆ, ಭಯೋತ್ಪಾದನೆ ದಾಳಿಯ ಭೀತಿಯಿಂದ ಪಾಕ್ ನೆಲದಲ್ಲಿ ನಡೆಯಲಿದ್ದ ಪಂದ್ಯಗಳನ್ನು ಭಾರತ ಮತ್ತು ಬಾಂಗ್ಲಾಕ್ಕೆ ಸ್ಥಳಾಂತರಿಸಲಾಯಿತು. ಇದರಿಂದಾಗಿ ಪಾಕ್ ತಂಡವು ಆತಿಥ್ಯದ ಆವಕಾಶ ಕಳೆದುಕೊಂಡಿತ್ತು.

2014ರಲ್ಲಿ ಬಿಸಿಸಿಐ ಮತ್ತು ಪಿಸಿಬಿ ನಡುವಣ ಫ್ಯೂಚರ್ ಟೂರ್ಸ್ ಆಂಡ್ ಪ್ರೋಗ್ರಾಂ(ಎಫ್‍ಟಿಪಿ) ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರ ಪ್ರಕಾರ  ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಆರು ಸರಣಿಗಳು ನಡೆಯಬೇಕಿತ್ತು. ಎರಡೂ ದೇಶಗಳ ನೆಲದಲ್ಲಿ ಈ ಸರಣಿಗಳು ಆಯೋಜನೆಗೊಳ್ಳ
ಬೇಕಿತ್ತು. ಆದರೆ ಹೆಚ್ಚಿದ ಭಯೋತ್ಪಾ ದನೆಯನ್ನು ವಿರೋಧಿಸಿದ್ದ ಭಾರತವು ಕ್ರಿಕೆಟ್ ಸಂಬಂಧ ಬೆಳೆಸಲು
ಒಪ್ಪಿರಲಿಲ್ಲ.

* ಮಹಿಳಾ, ಮಾನಸಿಕ ಅಸ್ವಸ್ಥ ಕೈದಿಗಳನ್ನು ಎರಡೂ ರಾಷ್ಟ್ರಗಳು ಮಾನವೀಯ ನೆಲೆಯಲ್ಲಿ ಹಸ್ತಾಂತರ ಮಾಡಿಕೊಳ್ಳುವ ಪ್ರಸ್ತಾವನೆ ಮುಂದಿಡಲಾಗಿದೆ ‌

–ಸುಷ್ಮಾ ಸ್ವರಾಜ್‌, ವಿದೇಶಾಂಗ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT