ಗುರುವಾರ , ಜೂಲೈ 9, 2020
27 °C

ಕೈದಿಗಳ ಸ್ಥಿತಿಗತಿ: ಸುಷ್ಮಾಗೆ ಪತ್ರ ಬರೆದ ಜೆಕೆಎಲ್‌ಎಫ್‌ ಮುಖಂಡ ಮಲ್ಲಿಕ್‌

ಪಿಟಿಐ Updated:

ಅಕ್ಷರ ಗಾತ್ರ : | |

ಶ್ರೀನಗರ: ಪಾಕಿಸ್ತಾನ ಜೈಲಿನಲ್ಲಿರುವ ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಸೇರಿದಂತೆ ಇತರ ಕೈದಿಗಳ ಸ್ಥಿತಿಗತಿ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್‌ ಫ್ರಂಟ್ (ಜೆಕೆಎಲ್‌ಎಫ್‌) ಮುಖ್ಯಸ್ಥ ಯಾಸಿನ್ ಮಲಿಕ್‌ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ಗೆ ಪತ್ರ ಬರೆದಿದ್ದಾರೆ.

ಶನಿವಾರ ಮಾಧ್ಯಮಗಳಿಗೆ ಈ ಪತ್ರ ಬಿಡುಗಡೆ ಮಾಡಿದ್ದಾರೆ. ಜಾಧವ್‌ ಭೇಟಿ ಸಂದರ್ಭದಲ್ಲಿ ಅವರ ತಾಯಿ ಮತ್ತು ಪತ್ನಿಯನ್ನು ಪಾಕಿಸ್ತಾನ ಸರ್ಕಾರ ನಡೆಸಿಕೊಂಡ ಬಗ್ಗೆ ಡಿಸೆಂಬರ್‌ 28 ರಂದು ಸಂಸತ್‌ನಲ್ಲಿ ಮಾತನಾಡಿದ ಸುಷ್ಮಾ ಅವರ ಮಾತುಗಳು ನನ್ನ ಮನ ಮುಟ್ಟಿವೆ ಎಂದು ಅವರು ತಿಳಿಸಿದ್ದಾರೆ.

‘ನಿಮ್ಮ ಮಾತುಗಳು ನನ್ನ ಮನ ಮುಟ್ಟಿದವು. ಒಬ್ಬ ಮನುಷ್ಯನಾಗಿ ಜೈಲುವಾಸದ ಕಷ್ಟಗಳ ಅರಿವಿದೆ. ಜಾಧವ್‌ ಅವರ ತಾಯಿ ಮತ್ತು ಪತ್ನಿ ಅನುಭವಿಸಿದ ನೋವನ್ನು ಅರ್ಥ ಮಾಡಿಕೊಳ್ಳಬಲ್ಲೆ’ ಎಂದಿದ್ದಾರೆ.

‘ಕೈದಿಗಳು ಪರಸ್ಪರ ಭೇಟಿಯಾಗಲು ಮತ್ತು ನ್ಯಾಯಯುತ ವಿಚಾರಣೆ ನಡೆಸಲು ಅನುವು ಮಾಡಿಕೊಡಿ ಎಂದು ಇದೇ ಸಂದರ್ಭದಲ್ಲಿ ಪಾಕಿಸ್ತಾನ ಸರ್ಕಾರಕ್ಕೆ ಕೋರುತ್ತೇನೆ ಎಂದಿದ್ದಾರೆ.

ಅಲ್ಲದೆ, ಜಾಧವ್‌ ಪ್ರಕರಣದಲ್ಲಿ ಭಾರತದ ನಡೆ ಪರಿಣಾಮಕಾರಿಯಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.