ಗುರುವಾರ , ಆಗಸ್ಟ್ 13, 2020
26 °C

ಯೋಧರ ಜತೆ ರಾಜನಾಥ್ ಹೊಸವರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯೋಧರ ಜತೆ ರಾಜನಾಥ್ ಹೊಸವರ್ಷ

ನವದೆಹಲಿ: ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರು ಚೀನಾ ಗಡಿಯಲ್ಲಿರುವ ಇಂಡೊ–ಟಿಬೆಟ್‌ ಗಡಿ ಪೊಲೀಸ್‌ ಪಡೆಯ ಸಿಬ್ಬಂದಿ ಜತೆ ಹೊಸವರ್ಷ ಆಚರಿಸಿದ್ದಾರೆ.

ಸಮುದ್ರ ಮಟ್ಟದಿಂದ 11,700 ಅಡಿ ಎತ್ತರದಲ್ಲಿರುವ ನೆಲಾಂಗ್‌ ಕಣಿವೆಯ ಗಡಿಚೌಕಿಗೆ ಭೇಟಿ ನೀಡಿದ ಸಿಂಗ್‌, ಸಿಬ್ಬಂದಿ ಜತೆ ಹೊಸವರ್ಷದ ಶುಭಾಶಯ ವಿನಿಮಯ ಮಾಡಿಕೊಂಡರು.

ದೋಕಲಾ ಗಡಿ ಬಿಕ್ಕಟ್ಟು ಸಂಘರ್ಷದ ನಂತರ ಕೇಂದ್ರದ ಹಿರಿಯ ಸಚಿವರೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲು.

ಭಾನುವಾರ ಅವರು ಉತ್ತರಕಾಶಿ ಮತ್ತು ಮಟ್ಲಿಯಲ್ಲಿರುವ ಐಟಿಬಿಪಿ ಸಿಬ್ಬಂದಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಶುಭಾಶಯ ಕೋರಿದ್ದರು.

ಐಟಿಬಿಪಿ ಮಹಾ ನಿರ್ದೇಶಕ ಆರ್‌.ಕೆ. ಪಚ್‌ನಂದಾ ಮತ್ತು ಹಿರಿಯ ಅಧಿಕಾರಿಗಳು ಸಚಿವರ ಜತೆಗಿದ್ದರು.

‘ಉತ್ಸಾಹದಿಂದ ಕಾರ್ಯ ನಿರ್ವಹಿಸಿ’: (ಪಿಟಿಐ ವರದಿ): ಸೇನೆಯ ಪ್ರಮುಖ ಮೌಲ್ಯಗಳನ್ನು ಉಳಿಸಿಕೊಳ್ಳಲು ಹೆಚ್ಚು ಉತ್ಸಾಹದಿಂದ ಕಾರ್ಯ ನಿರ್ವಹಿಸುವಂತೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್‌ ರಾವತ್‌ ಸೈನಿಕರಿಗೆ ಕರೆ ನೀಡಿದ್ದಾರೆ.

ಭಾನುವಾರ ಸೈನಿಕರಿಗೆ ನೀಡಿರುವ ಹೊಸ ವರ್ಷದ ಶುಭಾಶಯ ಸಂದೇಶದಲ್ಲಿ, ಸೇನೆಯ ರಾಜಕೀಯರಹಿತ ಗುಣದ ಜತೆ ಪ್ರಮುಖ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕಿದೆ ಎಂದಿದ್ದಾರೆ. ಸೇನೆಯು ಭಾರತದ ರಾಷ್ಟ್ರೀಯ ಶಕ್ತಿಯಾಗಿರುವುದರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

2017ರಲ್ಲಿ ಎದುರಾದ ಆಂತರಿಕ ಮತ್ತು ಬಾಹ್ಯ ಸವಾಲುಗಳನ್ನು ಸೈನಿಕರು ಸ್ಥೈರ್ಯ, ದೃಢಸಂಕಲ್ಪ ಮತ್ತು ಆತ್ಮಾಭಿಮಾನದಿಂದ ಎದುರಿಸಿರುವುದನ್ನು ಅವರು ಶ್ಲಾಘಿಸಿದ್ದಾರೆ. ಭಾರತ – ಚೀನಾ ನಡುವೆ ಉಂಟಾಗಿದ್ದ ದೋಕಲಾ ಬಿಕ್ಕಟ್ಟು ಮತ್ತು ಜಮ್ಮು–ಕಾಶ್ಮೀರದಲ್ಲಿ ಉಗ್ರ ಕೃತ್ಯಗಳ ನಿಯಂತ್ರಣ ಕಾರ್ಯಗಳ ಬಗ್ಗೆ ಅವರು ಈ ಮಾತು ಹೇಳಿದ್ದಾರೆ.

ನಿಷ್ಠೆ, ದೇಶದೆಡೆಗಿನ ಬದ್ಧತೆ ಮತ್ತು ರಾಜಕೀಯರಹಿತ ನಿಲುವುಗಳು ಸೇನೆಗೆ ವಿಶಿಷ್ಟ ಗೌರವ ದೊರಕಿಸಿಕೊಟ್ಟಿವೆ. ಅದನ್ನು ಕಾಪಾಡಿಕೊಳ್ಳಬೇಕಿದೆ ಎಂದೂ ಅವರು ತಿಳಿಸಿದ್ದಾರೆ.

‘ಸೇನೆಯ ಎಲ್ಲರೂ ಇನ್ನಷ್ಟು ಶ್ರದ್ಧೆಯಿಂದ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಿ. ಅತ್ಯುತ್ತಮವಾಗಿ ನಿಮ್ಮ ಜವಾಬ್ದಾರಿ ನಿಭಾಯಿಸಿ’ ಎಂದು ಅವರು ಕರೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.