ದೆಹಲಿಯಲ್ಲಿ ದಟ್ಟ ಮಂಜು: ವಿಮಾನ ಸಂಚಾರ ವಿಳಂಬ

7

ದೆಹಲಿಯಲ್ಲಿ ದಟ್ಟ ಮಂಜು: ವಿಮಾನ ಸಂಚಾರ ವಿಳಂಬ

Published:
Updated:
ದೆಹಲಿಯಲ್ಲಿ ದಟ್ಟ ಮಂಜು: ವಿಮಾನ ಸಂಚಾರ ವಿಳಂಬ

ನವದೆಹಲಿ: ದಟ್ಟ ಮಂಜಿನಿಂದಾಗಿ ಸೋಮವಾರ ದೆಹಲಿಯ ಇಂದಿರಾಗಾಂಧಿ ಅಂತರರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಬೇಕಿದ್ದ ವಿಮಾನಗಳ ಸಂಚಾರ ವಿಳಂಬವಾಗಿತ್ತು. ಇದರಿಂದಾಗಿ ಪ್ರಯಾಣಿಕರು ಸಾಕಷ್ಟು ಸಂಕಷ್ಟ ಎದುರಿಸಿದರು.

ಸಾಮಾನ್ಯವಾಗಿ ವಿಮಾನಗಳ ಸಂಚಾರಕ್ಕೆ 125 ಮೀಟರ್‌ವರೆಗೂ ವಾತಾವರಣ ಸ್ಪಷ್ಟವಾಗಿ ಗೋಚರಿಸಬೇಕು. ಆದರೆ ರನ್‌ವೇಯಲ್ಲಿ ವಾತಾವರಣದ ಸ್ಪಷ್ಟತೆ 50 ಮೀಟರ್‌ ತನಕ ಮಾತ್ರ ಇತ್ತು. ಇದರಿಂದಾಗಿ ಬೆಳಿಗ್ಗೆ 6ರಿಂದ 11 ಗಂಟೆವರೆಗೆ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿತ್ತು. ಬೇರೆಡೆಯಿಂದ ಬಂದ ವಿಮಾನಗಳ ಲ್ಯಾಂಡಿಂಗ್‌ ಸಹ ಸಮಸ್ಯೆಯಾಗಿತ್ತು.

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಮಾಹಿತಿಗಾಗಿ ಪರದಾಡುತ್ತಿದ್ದರು. ಆಸನಗಳು ಭರ್ತಿ ಆಗಿದ್ದರಿಂದ ಪ್ರಯಾಣಿಕರು ನೆಲದ ಮೇಲೆ, ಮೆಟ್ಟಿಲುಗಳ ಮೇಲೆ ಕುಳಿತಿರುವ ದೃಶ್ಯ ಕಂಡುಬಂದಿತು. ಭಾನುವಾರವೂ ದಟ್ಟ ಮಂಜಿನಿಂದಾಗಿ 350 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry