ತರಕಾರಿ ಬೆಲೆ ಮತ್ತಷ್ಟು ಇಳಿಕೆ

7

ತರಕಾರಿ ಬೆಲೆ ಮತ್ತಷ್ಟು ಇಳಿಕೆ

Published:
Updated:
ತರಕಾರಿ ಬೆಲೆ ಮತ್ತಷ್ಟು ಇಳಿಕೆ

ಬೆಂಗಳೂರು: ನಗರದ ಮಾರುಕಟ್ಟೆಗಳಲ್ಲಿ ತರಕಾರಿಗಳ ಬೆಲೆ ಮತ್ತಷ್ಟು ಇಳಿಕೆಯಾಗಿದೆ.

‘ಈ ಬಾರಿ ಮಳೆಯಾದ್ದರಿಂದ ಉತ್ತಮ ಬೆಳೆ ಬಂದಿದೆ. ದಾಸ್ತಾನು ಸಾಕಷ್ಟಿದೆ. ಫೆಬ್ರುವರಿ ಹಾಗೂ ಮಾರ್ಚ್‌ವರೆಗೆ ಇದೇ ಧಾರಣೆ ಮುಂದುವರಿಯಲಿದೆ’ ಎಂದು ಕೆ.ಆರ್‌. ಮಾರುಕಟ್ಟೆಯ ತರಕಾರಿ ವ್ಯಾಪಾರಿ ಇಕ್ಬಾಲ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಕ್ಯಾರೆಟ್‌ ಬೆಲೆ ₹ 50ರಿಂದ 60ರ ಆಜುಬಾಜಿನಲ್ಲಿ ಇದೆ. ಈರುಳ್ಳಿ ಬೆಲೆ ಕೊಂಚ ಏರಿಕೆ ಕಂಡಿದೆ. ಗಾತ್ರದ ಆಧಾರದ ಮೇಲೆ ಬೆಲೆಯಲ್ಲಿ ಹೆಚ್ಚು ಕಡಿಮೆ ಮಾಡಲಾಗುತ್ತಿದೆ. ಟೊಮೆಟೊ ಧಾರಣೆಯಲ್ಲಿ (ಕೆ.ಜಿ.ಗೆ ₹10) ವ್ಯತ್ಯಾಸ

ವಾಗಿಲ್ಲ. ಆಲೂಗಡ್ಡೆ ₹ 12ರಿಂದ 10ಕ್ಕೆ, ಎಲೆಕೋಸು ಹಾಗೂ ಹೂಕೋಸು ₹ 20, ಹಸಿ ಮೆಣಸಿನಕಾಯಿ ₹40 ಇದೆ. ಮೂಲಂಗಿ ₹ 40ರಿಂದ 10ಕ್ಕೆ ಇಳಿದಿದೆ.

ತರಕಾರಿ ಬೆಲೆ ಕಡಿಮೆ ಇರುವುದರಿಂದ ವ್ಯಾಪಾರ ಹೆಚ್ಚಾಗಿದೆ. ಆದರೆ, ವ್ಯಾಪಾರಿಗಳಿಗೇನೂ ಅಷ್ಟಾಗಿ ಲಾಭ ಸಿಗುತ್ತಿಲ್ಲ ಎಂದು ವಿವರಿಸಿದರು ವ್ಯಾಪಾರಿ ಮೊಹಮ್ಮದ್‌ ಇಲಿಯಾಸ್‌.

*

ಉತ್ತಮ ಮಳೆಯಾಗಿದ್ದರಿಂದ ಇಳುವರಿ ಹೆಚ್ಚಾಗಿದೆ. ಸರಬರಾಜು ಜಾಸ್ತಿಯಾಗಿದೆ. ಹೀಗಾಗಿ ತರಕಾರಿ ಬೆಲೆ ಇಳಿಕೆಯಾಗಿದೆ.

–ಗೋಪಾಲಗೌಡ, ಹಾಪ್‌‌ಕಾಮ್ಸ್‌ ಮಾರುಕಟ್ಟೆ ವ್ಯವಸ್ಥಾಪಕ

ತರಕಾರಿ (ಕೆ.ಜಿಗೆ ದರ ₹ಗಳಲ್ಲಿ)

ಮೂಲಂಗಿ– 10

ಟೊಮೆಟೊ– 10

ಆಲೂಗಡ್ಡೆ– 12

ಬದನೆ– 20

ಹೂಕೋಸು– 20

ಎಲೆಕೋಸು– 20

ಬೀನ್ಸ್‌– 30

ಬೀಟ್‌ರೂಟ್‌– 30

ಹಸಿ ಮೆಣಸಿನಕಾಯಿ– 40

ಬೆಳ್ಳುಳ್ಳಿ 50

*ಕೆ.ಆರ್.ಮಾರುಕಟ್ಟೆ ದರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry