ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲೆಗೆ ವಿಶ್ವಕರ್ಮರ ಕೊಡುಗೆ ಅಪಾರ’

Last Updated 2 ಜನವರಿ 2018, 6:30 IST
ಅಕ್ಷರ ಗಾತ್ರ

ಯಾದಗಿರಿ: ‘ವಿಶ್ವಕರ್ಮ ಸಮುದಾಯವನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ಅಮರಶಿಲ್ಪಿ ಜಕಣಾಚಾರಿ ಅವರಿಗೆ ಸಲ್ಲುತ್ತದೆ’ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಶಿವಣ್ಣ ಹೂನೂರ ಹೇಳಿದರು. ಇಲ್ಲಿನ ತಾಲ್ಲೂಕು ಘಟಕದ ಕಚೇರಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಮಾತನಾಡಿದರು.

‘ಭಾರತದ ಶ್ರೇಷ್ಠ ಕಲೆಗಳಿಗೆ ವಿಶ್ವಕರ್ಮರ ಕೊಡುಗೆ ಅತ್ಯಂತ ಪ್ರಮುಖವಾಗಿದೆ. ಆದರೆ, ಸಮುದಾಯದ ಜನರಿಗೆ ಇಲ್ಲಿಯವರೆಗೆ ಮೂಲಸೌಕರ್ಯ ಸಿಗದೆ ಬಡತನದಲ್ಲಿ ಬೆಂದು ಹೋಗುತ್ತಿದ್ದರೂ, ಯಾವೊಂದು ಸರ್ಕಾರವೂ ಅವರ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.

‘ವಿಶ್ವಕರ್ಮ ಸಮುದಾಯದ ಬಾಂಧವರಿಗೆ ಮೂಲಸೌಕರ್ಯ ಕಲ್ಪಿಸಲು ಹೋರಾಟ ಮಾಡಬೇಕಾದ ಅಗತ್ಯವಿದೆ. ಸಮಾಜದ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸಬೇಕಿದೆ’ ಎಂದು ಅವರು ಸಲಹೆ ನೀಡಿದರು.

ಮನೋಹರ ಬಿಳ್ಹಾರ, ಬನ್ನಪ್ಪ ಕಾಳಬೆಳಗುಂದಿ, ರಮೇಶ ಹತ್ತಿಕುಣಿ, ರಾಜಶೇಖರ ಕಾರ್ಪೆಂಟರ್, ಅಯ್ಯಪ್ಪ ಗಾಜರಕೋಟ್, ಜಗದೀಶ ಗಾಜರಕೋಟ್, ಮೋನೇಶ ಎನ್. ಮಾಮನಿ, ವಿಶ್ವನಾಥ ಶಹಾಬಾದ್, ಮಲ್ಲಿಕಾರ್ಜುನ ಕಂಬಾರ, ಸಕ್ರೆಪ್ಪ ಶಿಕ್ಷಕರು, ಶಿವಾನಂದ ಬಡಿಗೇರ್, ಬಸ್ಸಣ್ಣ ರಬೋಗಿ, ಸೂಗಪ್ಪ ಹೊಸಪೇಟೆ, ಸಂಗಣ್ಣ ಕಂಬಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT