ಶಾಸಕ ನಾಗೇಂದ್ರ ಕಾಂಗ್ರೆಸ್‌ ಸೇರ್ಪಡೆ ಶೀಘ್ರ?

7

ಶಾಸಕ ನಾಗೇಂದ್ರ ಕಾಂಗ್ರೆಸ್‌ ಸೇರ್ಪಡೆ ಶೀಘ್ರ?

Published:
Updated:

ಬಳ್ಳಾರಿ/ಕೂಡ್ಲಿಗಿ: ಇಲ್ಲಿನ ಪಕ್ಷೇತರ ಶಾಸಕ ಬಿ. ನಾಗೇಂದ್ರ ಇದೇ ತಿಂಗಳಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಜಿಲ್ಲೆಯಲ್ಲಿ ಹಬ್ಬಿದೆ. ಗೆದ್ದ ಬಳಿಕ ಇಷ್ಟೂ ದಿನ ಬಿಜೆಪಿಯಲ್ಲೇ ಗುರುತಿಸಿಕೊಂಡಿದ್ದ ಅವರ ಕಾಂಗ್ರೆಸ್‌ ಸೇರ್ಪಡೆ ವದಂತಿಯು ಪಕ್ಷದಲ್ಲಿ ಸಂಚಲನೆ ಮೂಡಿಸಿದೆ.

ಇದಕ್ಕೆ ಪುಷ್ಠಿ ನೀಡುವಂತೆ, ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರೂ ಆಗಿರುವ ಸಂಸದ ಬಿ.ಶ್ರೀರಾಮುಲು, ‘ನಾಗೇಂದ್ರ ಅವರನ್ನು ಬಿಜೆಪಿಗೆ ಕರೆ ತರುವ ಪ್ರಯತ್ನ ನಡೆಸಿದ್ದೇವೆ’ ಎಂದಿದ್ದಾರೆ.

ವೀರಭದ್ರೇಶ್ವರ ಚಿತ್ರ ಮಂದಿರದಲ್ಲಿ ಏರ್ಪಡಿಸಿದ್ದ ಬಿಜೆಪಿ ಪರಿವರ್ತನಾ ರ್‌್ಯಾಲಿಯ ಪೂರ್ವಭಾವಿ ಸಭೆಗೂ ಮುನ್ನ ಮಾತನಾಡಿದ ಅವರು, ‘ಮೂರು–ನಾಲ್ಕು ದಿನದಿಂದ ನಾಗೇಂದ್ರ ಅವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ’ ಎಂದರು.

ಸಂಪರ್ಕಕ್ಕೆ ಸಿಕ್ಕಿಲ್ಲ: ‘ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದ್ದ ವಾಲ್ಮೀಕಿ ಜಯಂತಿಯಲ್ಲಿ ನಾವಿಬ್ಬರೂ ಭಾಗಿಯಾಗಿದ್ದೆವು. ಆಗಲೂ ಯಾವುದೇ ವಿಷಯ ಪ್ರಸ್ತಾಪವಾಗಿರಲ್ಲಿಲ್ಲ. ಕೆಲವರು ನಾಗೇಂದ್ರ ಅವರ ಮನ ಪರಿವರ್ತನೆ ಮಾಡಿದ್ದಾರೆ. ಹೀಗಾಗಿ ಅವರು ಗೊಂದಲದಲ್ಲಿದ್ದಾರೆ. ಎರಡು ದಿನದಿಂದ ರಾಜ್ಯಮಟ್ಟದ ಮುಖಂಡರು ಕೂಡ ಅವರ ಮನ ಒಲಿಸುವ ಪ್ರಯತ್ನದಲ್ಲಿದ್ದಾರೆ ಆದರೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ರಾಜಕೀಯದಲ್ಲಿ ಇದೆಲ್ಲ ಸಹಜ’ ಎಂದರು.

ಬಿಜೆಪಿಯಿಂದಲೇ ಗೆದ್ದಿದ್ದರು: ಹಿಂದಿನ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ನಾಗೇಂದ್ರ, ಅದಕ್ಕೂ ಹಿಂದೆ, 2008ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಪಕ್ಷೇತರರರಾಗಿ ಗೆದ್ದರೂ ಅವರು ಪಕ್ಷದೊಂದಿಗೆ ನಂಟನ್ನು ಬಿಟ್ಟಿರಲಿಲ್ಲ. ಬಿಜೆಪಿಯ ಎಲ್ಲ ಕಾರ್ಯಕ್ರಮಗಳಲ್ಲೂ ಅವರು ಭಾಗವಹಿಸುತ್ತಿದ್ದರು. ಬಿಜೆಪಿಯವರೇ ಆಗಿದ್ದರು.

ಚುನಾವಣೆ ಘೋಷಣೆಯಾಗುವುದಕ್ಕೆ ಎಲ್ಲರೂ ಕಾಯುತ್ತಿರುವ ಈ ದಿನಗಳಲ್ಲೇ ಅವರ ಸೇರ್ಪಡೆ ವದಂತಿ ಹಬ್ಬಿದೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಯತ್ನಿಸಿದಾಗ ಅವರ ದೂರವಾಣಿ ಬಂದ್‌ ಆಗಿತ್ತು.

* * 

ರಾಜಕೀಯದಲ್ಲಿ ಇದೆಲ್ಲ ಸಹಜ, ಅವರು ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಪಕ್ಷಕ್ಕೆ ಸೇರುವಂತೆ ಅವರ ಮನ ಒಲಿಸುತ್ತೇವೆ.

–ಬಿ.ಶ್ರೀರಾಮುಲು, ಬಿಜೆಪಿ ಸಂಸದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry