ಸೋಮವಾರ, ಜೂಲೈ 6, 2020
28 °C

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ಸಹಿ ಸಂಗ್ರಹ ಆಂದೋಲನಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಲ್ಕಿ: ಇಲ್ಲಿಯ ಚನ್ನಬಸವಾಶ್ರಮದಲ್ಲಿ ಸೋಮವಾರ ವಿಶ್ವ ಲೋಕತಂತ್ರ ಮಹಾಲಯ, ಲಿಂಗಾಯತ ಸ್ವತಂತ್ರ ಧರ್ಮ ಸಮನ್ವಯ ಸಮಿತಿಯ ಸಂಯುಕ್ತಾಶ್ರಯದಲ್ಲಿ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆಗಾಗಿ ಸಹಿ ಸಂಗ್ರಹ ಆಂದೋಲನಕ್ಕೆ ವಿಶ್ವ ಲೋಕತಂತ್ರ ಮಹಾಲಯ ಸಂಸ್ಥಾಪಕ ಓಂಪ್ರಕಾಶ ರೊಟ್ಟೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಎಲ್ಲಾ ಗ್ರಾಮಗಳ ಸಾರ್ವಜನಿಕರಲ್ಲಿ ಸ್ವತಂತ್ರ ಧರ್ಮದ ಮಾನ್ಯತೆ ಬಗ್ಗೆ ಜಾಗೃತಿ ಮೂಡಿಸಿ, ಸಹಿ ಸಂಗ್ರಹಿಸಲಾಗುವುದು ಎಂದು ಹೇಳಿದರು.‌

ಬಸವರಾಜ ವೀರಶೆಟ್ಟಿ ಕರಡ್ಯಾಳ, ಪ್ರದೀಪ ಹೂಗಾರ ಜೊಳದಪಕಾ, ಶಾಂತಕುಮಾರ ಉಚ್ಚೆ ಸಿದ್ದೇಶ್ವರ, ಸಿದ್ರಾಮಪ್ಪ ಧೂಳೆ ದಾಡಗಿ, ವಿಶ್ವನಾಥ ಬಿರಾದಾರ ಲಾಧಾ, ನಾಗಯ್ಯಾ ಸ್ವಾಮಿ ಸಿದ್ದೇಶ್ವರ, ಷಣ್ಮುಖಯ್ಯಾ ಮಠಪತಿ, ಕಲ್ಯಾಣರಾವ ಕನಕಟ್ಟೆ, ಶ್ರೀಕಾಂತ ಭೊರಾಳೆ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.