ಎರಡು ಗಂಟೆ ಅವಧಿಯಲ್ಲಿ 6 ಜನರ ಕೊಲೆ ಮಾಡಿದ ಮಾಜಿ ಸೈನಿಕ

7

ಎರಡು ಗಂಟೆ ಅವಧಿಯಲ್ಲಿ 6 ಜನರ ಕೊಲೆ ಮಾಡಿದ ಮಾಜಿ ಸೈನಿಕ

Published:
Updated:
ಎರಡು ಗಂಟೆ ಅವಧಿಯಲ್ಲಿ 6 ಜನರ ಕೊಲೆ ಮಾಡಿದ ಮಾಜಿ ಸೈನಿಕ

ಚಂಡೀಗಡ: ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಕೇವಲ 2 ಗಂಟೆ ಅವಧಿಯಲ್ಲಿ ಆರು ಜನರನ್ನು ಹತ್ಯೆ ಮಾಡಿರುವ ಘಟನೆ ಹರಿಯಾಣದ ಪಲ್ವಾಲ್‌ ನಗರ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.

ಘಟನಾ ಸ್ಥಳದಿಂದ ಕೇವಲ 100 ಮೀಟರ್‌ ದೂರದಲ್ಲಿ ಪೊಲೀಸ್‌ ಠಾಣೆಯಿದ್ದು, ಕೊಲೆಗಾರನನ್ನು ಬಂಧಿಸಲಾಗಿದೆ.

ಕಬ್ಬಿಣದ ರಾಡ್‌ ಬಳಸಿ ಹತ್ಯೆ ಮಾಡಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಕೊಲೆಗಾರರನ್ನು ನರೇಶ್‌ ಎಂದು ಗುರುತಿಸಲಾಗಿದ್ದು, ಈತ ಮಾಜಿ ಸೈನಿಕ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ಆರು ಜನರಲ್ಲಿ ಓರ್ವ ಮಹಿಳೆ ಹಾಗೂ ಮೂವರು ವಾಚ್‌ಮನ್‌ಗಳು. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಕೊಲೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ.

ಘಟನೆಯಲ್ಲಿ ಕೊಲೆಗಾರನೂ ಗಾಯಗೊಂಡಿದ್ದು, ಬಂಧಿಸಲು ಯತ್ನಿಸಿದ ಪೊಲೀಸರ ಮೇಲೂ ದಾಳಿ ಮಾಡಲು ಮುಂದಾಗಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry