ಕೇಂದ್ರ ಸಚಿವ ವಿರುದ್ಧ ಪ್ರತಿಭಟನೆ

7

ಕೇಂದ್ರ ಸಚಿವ ವಿರುದ್ಧ ಪ್ರತಿಭಟನೆ

Published:
Updated:

ಶನಿವಾರಸಂತೆ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹಾಗೂ ವಿಜಯಪುರದ ದಲಿತ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಕೊಡ್ಲಿಪೇಟೆ ಹೋಬಳಿ ದಸಂಸ, ಕರವೇ ಹಾಗೂ ಟಿಪ್ಪು ಅಭಿಮಾನಿಗಳ ಸಂಘದ ವತಿಯಿಂದ ಕೊಡ್ಲಿಪೇಟೆಯಲ್ಲಿ ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಸಲಾಯಿತು.

ಮಧ್ಯಾಹ್ನ 1 ಗಂಟೆಯವರೆಗೆ ಅಂಗಡಿಮುಂಗಟ್ಟು ಹೊಟೇಲ್ ಗಳನ್ನು ಬಂದ್ ಮಾಡಲಾಗಿತ್ತು. ಕಡೇಪೇಟೆಯಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು ಬಸ್ ನಿಲ್ದಾಣಕ್ಕೆ ಬಂದು ಮಾನವ ಸರಪಳಿ ನಿರ್ಮಿಸಿ, ಸಚಿವ ಅನಂತಕುಮಾರ್ ಹೆಗಡೆ ಪ್ರತಿಕೃತಿ ದಹನ ಮಾಡಿ, ಧಿಕ್ಕಾರ ಕೂಗಿದರು.

ದಲಿತ ಮುಖಂಡ ನಿರ್ವಾಣಪ್ಪ, ಕಾಂಗ್ರೆಸ್ ಹೋಬಳಿ ಘಟಕದ ಅಧ್ಯಕ್ಷ ಔರಂಗ್ ಜೇಬ್, ಬಿಎಸ್ ಪಿಯ ಮೋಹನ್ ಮೌರ್ಯ ಹಾಗೂ ದಲಿತ ಒಕ್ಕೂಟಗಳ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ್ ಮಾತನಾಡಿದರು. ಬಳಿಕ ಪ್ರತಿಭಟನಾಕಾರರು ನಾಡಕಚೇರಿಗೆ ತೆರಳಿ ಕಂದಾಯ ಅಧಿಕಾರಿ ದೇವರಾಜ್ ಅವರಿಗೆ ಮನವಿಪತ್ರ ಸಲ್ಲಿಸಿದರು. ಕಾಂಗ್ರೆಸ್ ಮುಖಂಡ ಮಹಮ್ಮದ್ ಹನೀಫ್,

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry