ದೇಶ ಉಳಿದಿರುವುದು ಜಾತ್ಯಾತೀತ ಜನರಿಂದ: ಸೀತಾರಾಂ ಯೆಚೂರಿ

7

ದೇಶ ಉಳಿದಿರುವುದು ಜಾತ್ಯಾತೀತ ಜನರಿಂದ: ಸೀತಾರಾಂ ಯೆಚೂರಿ

Published:
Updated:
ದೇಶ ಉಳಿದಿರುವುದು ಜಾತ್ಯಾತೀತ ಜನರಿಂದ: ಸೀತಾರಾಂ ಯೆಚೂರಿ

ಮೂಡುಬಿದಿರೆ: 'ಧರ್ಮ, ಜಾತಿ, ಕುಲದ ಗುರುತನ್ನು ಮೀರಿ‌ ಮೊದಲು‌ ನಾನು ಭಾರತೀಯ ಎಂಬುವವರೇ ಜಾತ್ಯಾತೀತರು. ಅವರಿಂದಾಗಿಯೇ ದೇಶ ಉಳಿದಿದೆ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದರು.

ಸಿಪಿಎಂ ‌22ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

’ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಕೈಗೊಂಡ ‌ಕೇಂದ್ರದ ಮಂತ್ರಿ ಅನಂತಕುಮಾರ್ ಹೆಗಡೆ ಈಗ ಸಂವಿಧಾನದ ಬದಲಾವಣೆ ಮಾತನಾಡುತ್ತಿದ್ದಾರೆ. ಜಾತ್ಯಾತೀತರಿಗೆ ಅಪ್ಪ, ಅಮ್ಮನ ಗುರುತಿಲ್ಲ ಎಂಬ ಕೀಳು ಹೇಳಿಕೆ ನೀಡಿದ್ದಾರೆ. ಜಾತ್ಯಾತೀತ ಜನರಿಂದಲೇ‌ ದೇಶ ಉಳಿದಿದೆ ಎಂಬುದನ್ನು ಅವರು ಮೊದಲು ಅರಿಯಬೇಕು' ಎಂದರು.

ದೇಶ ಹಿಂದೆಂದೂ ಕಾಣದಂತಹ ಕೋಮುವಾದಿ ಧ್ರುವೀಕರಣದ ಅಪಾಯ ಎದುರಿಸುತ್ತಿದೆ. ಅದರಿಂದ ಜನರ ‌ದೈನಂದಿನ‌ ಸಮಸ್ಯೆಗಳು ‌ಬದಿಗೆ ಸರಿಯುತ್ತಿವೆ. ಕೋಮುವಾದಿ ಕಾರ್ಯಸೂಚಿಯ ಮೂಲಕ‌ ಜನರ‌ ದಿಕ್ಕು ತಪ್ಪಿಸಲಾಗುತ್ತಿದೆ. ಇದರಿಂದ ಬಂಡವಾಳ ಷಾಹಿಗಳ‌ ಲಾಭ ಹೆಚ್ಚುತ್ತಿದೆ ಎಂದು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry