ಐಎಸ್‌ ಸಂಘಟನೆಯ 65 ಉಗ್ರರ ಹತ್ಯೆಗೈದ ಅಘ್ಘಾನ್‌ ಸೇನೆ

7

ಐಎಸ್‌ ಸಂಘಟನೆಯ 65 ಉಗ್ರರ ಹತ್ಯೆಗೈದ ಅಘ್ಘಾನ್‌ ಸೇನೆ

Published:
Updated:
ಐಎಸ್‌ ಸಂಘಟನೆಯ 65 ಉಗ್ರರ ಹತ್ಯೆಗೈದ ಅಘ್ಘಾನ್‌ ಸೇನೆ

ಕಾಬೂಲ್‌: ದೇಶದ ಪೂರ್ವಗಡಿ ಭಾಗದಲ್ಲಿ ಕನಿಷ್ಠ 65 ಮಂದಿ ಐಎಸ್‌ ಉಗ್ರರನ್ನು ಹತ್ಯೆ ಮಾಡಿರುವುದಾಗಿ ಅಫ್ಘಾನಿಸ್ತಾನದ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಇಲ್ಲಿನ ಹಸ್ಕಾ ಮೇನಾ ಜಿಲ್ಲೆಯ ಗೊರ್ಗೋರೆ ಹಾಗೂ ವಂಗೋರಾ ಪ್ರದೇಶಗಳಲ್ಲಿ ಭೂ ಮತ್ತು ವಾಯುಸೇನಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಕಾರ್ಯಾಚರಣೆ ವೇಳೆ ಒಬ್ಬ ನಾಗರಿಕ ಮೃತಪಟ್ಟಿದ್ದು, 13 ಜನರು ಗಾಯಗೊಂಡಿದ್ದಾರೆ ಎಂದು ನಂಗರ್ಹಾರ್‌ ಪ್ರಾಂತ್ಯದ ವಕ್ತಾರ ಅತಾವುಲ್ಲಾ ಖೋಗ್ಯಾನಿ ಹೇಳಿದ್ದಾರೆ.

ಆದರೆ, ಈ ಕುರಿತು ಐಎಸ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಐಎಸ್‌ ಉಗ್ರರನ್ನು ಸದೆಬಡಿಯಲು ಅಮೆರಿಕ ಸೇನೆಯೂ ಇತ್ತೀಚೆಗೆ ಡ್ರೋಣ್‌ ದಾಳಿ ಸಂಘಟಿಸಿತ್ತು. ಈ ವೇಳೆ 11 ಉಗ್ರರು ಮೃತಪಟ್ಟಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry