2017ರಲ್ಲಿ 81 ಲಕ್ಷ ಜನರಿಂದ ವೈಷ್ಣೊದೇವಿ ದರ್ಶನ

7

2017ರಲ್ಲಿ 81 ಲಕ್ಷ ಜನರಿಂದ ವೈಷ್ಣೊದೇವಿ ದರ್ಶನ

Published:
Updated:
2017ರಲ್ಲಿ 81 ಲಕ್ಷ ಜನರಿಂದ ವೈಷ್ಣೊದೇವಿ ದರ್ಶನ

ಜಮ್ಮು : ಜಮ್ಮು–ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿನ ವೈಷ್ಣೊದೇವಿ ದೇವಸ್ಥಾನಕ್ಕೆ ಭೇಟಿ ನೀಡುವವರ ಸಂಖ್ಯೆ ಪ್ರತಿವರ್ಷ ಗಣನೀಯವಾಗಿ ಹೆಚ್ಚುತ್ತಿದೆ. 2017ರಲ್ಲಿ ಇಲ್ಲಿಗೆ 81.78 ಲಕ್ಷ ಜನರು ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

‘2016ರಲ್ಲಿ ಈ ಗುಹಾಂತರ ದೇವಾಲಯಕ್ಕೆ 4.54 ಲಕ್ಷ ಜನರು ಭೇಟಿ ನೀಡಿದ್ದರು. ಈಗ ಅವರ ಸಂಖ್ಯೆ 81,78,318ಕ್ಕೆ ಏರಿಕೆಯಾಗಿದೆ’ ಎಂದು ದೇವಾಲಯದ ವಕ್ತಾರರು ತಿಳಿಸಿದರು.

ಹೊಸ ವರ್ಷದ ಮೊದಲ ದಿನದಂದು ಮಾತಾ ವೈಷ್ಣೊದೇವಿ ದೇವಾಲಯ ಮಂಡಳಿಯ ಅಧ್ಯಕ್ಷರೂ ಆಗಿರುವ ರಾಜ್ಯಪಾಲ ಎನ್‌.ಎನ್‌.ವೊಹ್ರಾ ಅವರು ತಮ್ಮ ಪತ್ನಿ ಉಷಾ ವೊಹ್ರಾ ಅವರೊಂದಿಗೆ ದೇವಾಲಯಕ್ಕೆ ತೆರಳಿ ರಾಜ್ಯದಲ್ಲಿ ಶಾಂತಿ ನೆಲೆಸಿ, ಅಭಿವೃದ್ಧಿ ಚುರುಕುಗೊಳ್ಳಲಿ ಎಂದು ಪ್ರಾರ್ಥಿಸಿದ್ದರು.

ರಾಜ್ಯಪಾಲರು ಯಾತ್ರಾಸ್ಥಳದಲ್ಲಿ ಸೂಕ್ತ ಮೂಲಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರಲ್ಲದೆ, ದೇವಾಲಯದ ಆವರಣದಲ್ಲಿ ನಡೆದಿರುವ ರೂಪ್‌ವೇ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry