ಶನಿವಾರ, ಜೂಲೈ 4, 2020
21 °C

ತುಳು ಲಿಪಿಯ ಕ್ಯಾಲೆಂಡರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಳು ಲಿಪಿಯ ಕ್ಯಾಲೆಂಡರ್

ಮಂಗಳೂರಿನ ‘ನಮ್ಮ ತುಳುನಾಡ್‌ ಟ್ರಸ್ಟ್’ ತುಳು ಕ್ಯಾಲೆಂಡರ್ ’ತುಳುವೆರೆನ ಕಾಲಕೊಂಡೆ–2018’ ಪ್ರಕಟಿಸಿದೆ. ತುಳು ಲಿಪಿ ಮತ್ತು ತುಳು ಸಂಖ್ಯೆಗಳನ್ನೇ ಬಳಸಿರುವುದು ಈ ಕ್ಯಾಲೆಂಡರ್‌ನ ವೈಶಿಷ್ಟ್ಯ.

ಈ ಕ್ಯಾಲೆಂಡರಿನಲ್ಲಿ ವಾರದ ಹೆಸರುಗಳನ್ನು ತುಳು ಲಿಪಿಯಲ್ಲೇ ಬರೆಯಲಾಗಿದೆ. ಐತ್ತಾರ, ಸೋಮಾರ, ಅಂಗಾರೆ... ವಾರದ ಹೆಸರು, ತಿಂಗಳು, ಹುಣ್ಣಿಮೆ ಅಮಾವಾಸ್ಯೆಯ ಮಾಹಿತಿಯನ್ನೂ ತುಳುವಿನಲ್ಲೇ ನೀಡಲಾಗಿದೆ.

ತುಳು ಲಿಪಿಯನ್ನು ಕಲಿಯುವ ಆಸಕ್ತರಿಗೆ ಸ್ವರಗಳು, ವ್ಯಂಜನಗಳು, ಇತರ ಅಕ್ಷರಗಳು, ಲೇಖನ ಚಿಹ್ನೆಗಳು, ಉದ್ಧರಣ ಚಿಹ್ನೆಗಳು ಹಾಗೂ ಅಕ್ಷರ ಬಳಕೆಯ ವಿಧಾನಗಳನ್ನು ಈ ಕ್ಯಾಲೆಂಡರಿನಲ್ಲಿ ವಿವರಿಸಲಾಗಿದೆ.

ನಾಡೋಜ ಕಯ್ಯಾರ ಕಿಂಞಣ್ಣ ರೈ, ಡಾ. ವೆಂಕಟರಾಜ ಪುಣಿಂಚಿತ್ತಾಯ ಅವರ ಕವನದ ಸಾಲುಗಳು, ತುಳುವಿನ ಜಾನಪದ ಪಾಡ್ದನಗಳಿಂದ ಆಯ್ದ ನುಡಿಗಳನ್ನು ಪ್ರಕಟಿಸಲಾಗಿದೆ. ದರವನ್ನು ಮುದ್ರಿಸಿಲ್ಲ. ಸಂಪರ್ಕಕ್ಕೆ ಮೊ– 99646 69218.

– ಪ್ರಶಾಂತ ರಾಜ ವಿ ಟಿ ಅಡೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.