ಜಾರಿಗೆ ಬರಲಿ

7

ಜಾರಿಗೆ ಬರಲಿ

Published:
Updated:

ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವರು ಈಚೆಗೆ, ಹೋಬಳಿಗೊಂದು ಪಬ್ಲಿಕ್ ಶಾಲೆ ಆರಂಭಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ಈ ಖಾತೆ ನಿಭಾಯಿಸಿದ ಸಚಿವರೂ ಇದೇ ರೀತಿಯ ಹೇಳಿಕೆ ಕೊಟ್ಟಿದ್ದರು. ಆದರೆ ಅವರ ಹೇಳಿಕೆ ಜಾರಿಯಾಗಲಿಲ್ಲ.

ವಾಸ್ತವದಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುವುದು ಬಹುಮಟ್ಟಿಗೆ ಬಡವರ ಮಕ್ಕಳು. ನೂರಾರು ಸಮಸ್ಯೆ, ಕೊರತೆಗಳ ಮಧ್ಯೆ ಅವರು ಶಿಕ್ಷಣ ಪಡೆಯುತ್ತಿದ್ದಾರೆ. ಹೋಬಳಿಗೊಂದು ಪಬ್ಲಿಕ್ ಶಾಲೆ ಆರಂಭಿಸಿದರೆ ಬಡಮಕ್ಕಳಿಗೆ ತುಂಬಾ ಅನುಕೂಲವಾಗುತ್ತದೆ. ವಿಷಯವಾರು ಶಿಕ್ಷಕರು, ಗ್ರಂಥಾಲಯ, ಪ್ರಯೋಗಾಲಯ, ಶೌಚಾಲಯ, ಕುಡಿಯುವ ನೀರು, ಆಟದ ಮೈದಾನ... ಹೀಗೆ ಎಲ್ಲ ಸೌಕರ್ಯಗಳನ್ನು ನೀಡಿ ಶಾಲೆ ಆರಂಭಿಸಿದರೆ ಅರ್ಥಪೂರ್ಣ.

–ಕಂಡಕ್ಟರ್ ಸೋಮು, ಎಡೆಯೂರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry