ಕ್ರಿಕೆಟ್‌: ಸ್ವಸ್ತಿಕ್ ಯೂನಿಯನ್‌ಗೆ ಜಯ

7

ಕ್ರಿಕೆಟ್‌: ಸ್ವಸ್ತಿಕ್ ಯೂನಿಯನ್‌ಗೆ ಜಯ

Published:
Updated:

ಬೆಂಗಳೂರು: ಆರ್‌.ಸಮರ್ಥ್‌ (54) ಅವರ ಅರ್ಧಶತಕದ ನೆರವಿನಿಂದ ಸ್ವಸ್ತಿಕ್ ಯೂನಿಯನ್ (1) ತಂಡ ಇಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ವತಿಯ ಟಿ–20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸ್ವಸ್ತಿಕ್ ಯೂನಿಯನ್ ಕ್ಲಬ್‌ (2) ಎದುರು 9 ರನ್‌ಗಳಿಂದ ಗೆದ್ದಿದೆ.

ಸಂಕ್ಷಿಪ್ತ ಸ್ಕೋರು: ಸ್ವಸ್ತಿಕ್ ಯೂನಿಯನ್ ಕ್ಲಬ್‌ (1): 20 ಓವರ್‌ಗಳಲ್ಲಿ 5 ವಿಕೆಟ್‌ಗೆ 145 (ಆರ್‌.ಸಮರ್ಥ್‌ 54, ಕೆ.ವಿ ಸಿದ್ದಾರ್ಥ್‌ 26). ಸ್ವಸ್ತಿಕ್ ಯೂನಿಯನ್ ಕ್ಲಬ್‌ (2): 20 ಓವರ್‌ಗಳಲ್ಲಿ 9 ವಿಕೆಟ್‌ಗೆ 136 (ಮಿತ್ರಾಕಾಂತ್‌ ಸಿಂಗ್‌ ಯಾದವ್‌ 27, ಕಾರ್ತಿಕ್‌ 21; ಶ್ರೇಯಸ್‌ ಗೋಪಾಲ್‌ 32ಕ್ಕೆ2, ಅಮನ್ ಖಾನ್‌ 33ಕ್ಕೆ2, ಸಕ್ಷಮ್‌ 12ಕ್ಕೆ2). ಫಲಿತಾಂಶ: ಸ್ವಸ್ತಿಕ್ ಯೂನಿಯನ್ ಕ್ಲಬ್‌ (1) ತಂಡಕ್ಕೆ 9 ರನ್‌ಗಳ ಜಯ.

ಜವಾನ್ಸ್‌ ಕ್ಲಬ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 151 (ದಿನೇಶ್‌ ಬೋರ್ವಾಂಕರ್‌ 70, ನಿಶಾಂತ್ ಸಿಂಗ್‌ 42, ಮಿಲಿಂದ್ ರಮೇಶ್‌ ಅಜೇಯ 27, ಎಚ್‌.ಎಸ್‌.ಶರತ್‌ 20ಕ್ಕೆ2). ಹೆರಾನ್ಸ್ ಕ್ಲಬ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 118 (ಲಾಲ್ ಸಚಿನ್‌ 25, ಎಮ್‌.ಕಾರ್ತಿಕ್‌ 25, ಪ್ರತಾಪ್‌ 22, ಡೇವಿಡ್‌ ಮತಿಯಾಸ್‌ 24ಕ್ಕೆ3). ಫಲಿತಾಂಶ: ಜವಾನ್ಸ್‌ ಕ್ಲಬ್‌ಗೆ 33 ರನ್‌ಗಳ ಜಯ.

ವಲ್ಚರ್ಸ್‌ ಕ್ಲಬ್‌: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 221 (ಎನ್‌.ಜಿ ಸುಜಿತ್‌ 26, ಅನಿವೃದ್‌ 79, ಪವನ್‌ ದೇಶ್‌ಪಾಂಡೆ 46, ಪ್ರವೀಣ್‌ ದುಬೆ 47, ರೋಹನ್‌ ಶೆಟ್ಟಿ 54ಕ್ಕೆ2). ಹಮ್ಮಂಡ್ಸ್‌ ಕ್ಲಬ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 80 (ಅರವಿಂದ್‌ 20, ಶಿವ್‌ ವಿ.ನೀರಜ್‌ 21, ರುಚಿರ್ ಜೋಷಿ 11ಕ್ಕೆ2, ಜೆ.ಸುಚಿತ್‌ 5ಕ್ಕೆ2). ಫಲಿತಾಂಶ: ವಲ್ಚರ್ಸ್ ತಂಡಕ್ಕೆ 141 ರನ್‌ಗಳ ಜಯ.

ಸರ್‌ ಸೈಯದ್ ಕ್ರಿಕೆಟರ್ಸ್‌: 20 ಓವರ್‌ಗಳಲ್ಲಿ 89 (ದೀಪೇಶ್‌ ಪೂನಿಯಾ 22ಕ್ಕೆ3, ಲಿಖಿತ್ ಬನ್ನೂರು 10ಕ್ಕೆ3, ಬಿ.ಯು ಶಿವಕುಮಾರ್‌ 22ಕ್ಕೆ4). ಫ್ರೆಂಡ್ಸ್ ಯೂನಿಯನ್ ಕ್ಲಬ್‌ (1): 9.3 ಓವರ್‌ಗಳಲ್ಲಿ 90 (ಕೃಷ್ಣ 69, ವಿನಯ್‌ ಎನ್‌.ಸಾಗರ್‌ 21). ಫಲಿತಾಂಶ: ಫ್ರೆಂಡ್ಸ್‌ ಯೂನಿಯನ್‌ಗೆ 10 ವಿಕೆಟ್‌ಗಳ ಜಯ.

ಸೋಷಿಯಲ್ ಕ್ರಿಕೆಟರ್ಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 151 (ರೋಹನ್ ಕದಮ್‌ 57, ಮೊಹಮ್ಮದ್ ತಹಾ 27, ವಿ.ವೈಶಕ್‌ 29, ಟಿ.ಪ್ರದೀಪ್‌ 28ಕ್ಕೆ3). ಬೆಂಗಳೂರು ಒಕೇಷನಲ್ಸ್‌: 19.2 ಓವರ್‌ಗಳಲ್ಲಿ 5 ವಿಕೆಟ್‌ಗೆ 155 (ಅಬ್ದುಲ್‌ ಮಜಿದ್‌ 80, ರಿತೇಶ್ ಭಟ್ಕಳ್‌ 30ಕ್ಕೆ2). ಫಲಿತಾಂಶ: ಬೆಂಗಳೂರು ಒಕೇಷನಲ್ಸ್‌ ತಂಡಕ್ಕೆ 5 ವಿಕೆಟ್‌ಗಳ ಜಯ.

ವಿಲ್ಸನ್‌ ಗಾರ್ಡನ್‌ ಕ್ಲಬ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 136 (ಆಸಿಫ್‌ 53, ಶರಣ ಬಸವಾ 25, ಪ್ರಸಿದ್ಧ ಎಮ್‌.ಕೃಷ್ಣ 26ಕ್ಕೆ2, ಐ.ಜಿ ಅನಿಲ್‌ 18ಕ್ಕೆ3). ಮೌಂಟ್ ಜಾಯ್‌ ಕ್ಲಬ್‌: 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 137 (ಡಿ.ನಿಶ್ಚಲ್‌ 22, ಬಿ.ಆರ್ ಶರತ್‌ 37, ಸಮರ್ಥ್ ಊಟಿ 29, ಕಿರಣ್‌ 25). ಫಲಿತಾಂಶ: ಮೌಂಟ್ ಜಾಯ್‌ ಕ್ಲಬ್‌ಗೆ 6 ವಿಕೆಟ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry