ಮಂಗಳವಾರ, ಆಗಸ್ಟ್ 11, 2020
24 °C

ಮೇವು ಹಗರಣದಲ್ಲಿ ತಪ್ಪಿತಸ್ಥ ಲಾಲುಗೆ ಶಿಕ್ಷೆ ಇಂದು ಪ್ರಕಟ

ಪಿಟಿಐ Updated:

ಅಕ್ಷರ ಗಾತ್ರ : | |

ಮೇವು ಹಗರಣದಲ್ಲಿ ತಪ್ಪಿತಸ್ಥ ಲಾಲುಗೆ ಶಿಕ್ಷೆ ಇಂದು ಪ್ರಕಟ

ರಾಂಚಿ: ಮೇವು ಹಗರಣದಲ್ಲಿ ತಪ್ಪಿತಸ್ಥರಾಗಿ ಜೈಲು ಸೇರಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರಿಗೆ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.

ದೇವಗಡ ಖಜಾನೆಯಿಂದ ಅಕ್ರಮವಾಗಿ ₹89 ಲಕ್ಷ ಹಣ ಪಡೆದ ಪ್ರಕರಣದಲ್ಲಿ ಲಾಲು ದೋಷಿ ಎಂದು ನ್ಯಾಯಾಲಯ ಹೇಳಿತ್ತು.

ಬಹು ಕೋಟಿ ಮೇವು ಹಗರಣ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ತಪ್ಪಿತಸ್ಥ ಎಂದು ಶನಿವಾರ(ಡಿ.23) ತೀರ್ಪು ಪ್ರಕಟಿಸಿದ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ, ಲಾಲುರನ್ನು ಪೊಲೀಸರ ವಶಕ್ಕೆ ನೀಡಿತ್ತು.

ಪ್ರಕರಣದಲ್ಲಿ ಲಾಲು ಪ್ರಸಾದ್‌ ಸೇರಿದಂತೆ 15 ಜನ ದೋಷಿಗಳು. ಬಿಹಾರದ ಮಾಜಿ ಮುಖ್ಯಮಂತ್ರಿ ಡಾ.ಜಗನ್ನಾಥ್‌ ಮಿಶ್ರಾ ಸೇರಿದಂತೆ ಏಳು ಮಂದಿ ನಿರ್ದೋಷಿಗಳುಗಳು ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ನ್ಯಾಯಾಲಯ ಲಾಲು ಸೇರಿದಂತೆ 15 ತಪ್ಪಿತಸ್ಥರ ಶಿಕ್ಷೆ ಪ್ರಮಾಣವನ್ನು ಇಂದು ಪ್ರಕಟಿಸಲಿದೆ. ನ್ಯಾಯಾಲಯ ತೀರ್ಪು ಪ್ರಕಟಿಸಿ ಆದೇಶ ನೀಡುತ್ತಿದ್ದಂತೆ ತಕ್ಷಣ ಲಾಲು ಪ್ರಸಾದ್‌ ಸೇರಿದಂತೆ ದೋಷಿಗಳನ್ನು ಬಂಧನಕ್ಕೆ ಒಳಪಡಿಸಲಾಗಿತ್ತು. ಲಾಲುರನ್ನು ವಶಕ್ಕೆ ಪಡೆ ಪೊಲೀಸರು ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದರು.

1997ರ ಅಕ್ಟೋಬರ್ 27ರಂದು 38 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಅವರಲ್ಲಿ ಹನ್ನೊಂದು ಮಂದಿ ಮೃತಪಟ್ಟಿದ್ದಾರೆ ಮತ್ತು ಮೂರು ಮಂದಿ ಮಾಫಿ ಸಾಕ್ಷಿ ನೀಡಿದರು. ಇಬ್ಬರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.