ಅಸ್ಪೃಶ್ಯತೆ ಆಚರಣೆ ನಾಲ್ವರ ಬಂಧನ

7

ಅಸ್ಪೃಶ್ಯತೆ ಆಚರಣೆ ನಾಲ್ವರ ಬಂಧನ

Published:
Updated:

ಯಾದಗಿರಿ: ನೂತನ ತಾಲ್ಲೂಕು ವಡಗೇರಾ ವ್ಯಾಪ್ತಿಯ ಬಿಳ್ಹಾರ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

‘ಬಿಳ್ಹಾರ ಗ್ರಾಮದ ಸಣ್ಣ ಸಿದ್ದಪ್ಪ, ದೊಡ್ಡ ಸಿದ್ದಪ್ಪ, ಚಹಾ ಹುಸೇನಿ, ಹುಸೇನ್‌ ಸಾಬ್‌ ಬಂಧಿತರು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ತಿಳಿಸಿದ್ದಾರೆ.

‘ಇವರು ಗ್ರಾಮದಲ್ಲಿ ಚಹಾ, ಮಂಡಕ್ಕಿ ಮಿರ್ಚಿ ಅಂಗಡಿ ನಡೆಸುತ್ತಿದ್ದರು. ಇವರ ಅಂಗಡಿಗೆ ಬರುವ ಮಾದಿಗ ಮತ್ತು ಹೊಲೆಯ ಜಾತಿಯ ಜನರಿಗೆ ಪ್ರತ್ಯೇಕ ಟೀ ಲೋಟ, ತಟ್ಟೆ ಇಟ್ಟಿದ್ದರು. ಅಲ್ಲದೆ ನೀರನ್ನು ಬೊಗಸೆಯಲ್ಲಿ ಎತ್ತಿ ಹಾಕುತ್ತಿದ್ದರು’ ಎಂದು ಅದೇ ಗ್ರಾಮದ ಸುರೇಶ್ ಅವರು ವಡಗೇರಾ ಠಾಣೆಗೆ ದೂರು ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry