ರಾಜೇಶ್ ರೈ ಚಟ್ಲಗೆ ಅಭಿಮಾನಿ ಪ್ರಶಸ್ತಿ

7

ರಾಜೇಶ್ ರೈ ಚಟ್ಲಗೆ ಅಭಿಮಾನಿ ಪ್ರಶಸ್ತಿ

Published:
Updated:

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯ 2017ನೇ ಸಾಲಿನ ‘ಅಭಿಮಾನಿ’ ಪ್ರಶಸ್ತಿಗೆ ‘ಪ್ರಜಾವಾಣಿ’ಯ ರಾಜೇಶ್ ರೈ ಚಟ್ಲ ಭಾಜನರಾಗಿದ್ದಾರೆ.

ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನಕ್ಕೆ ಈ ಪ್ರಶಸ್ತಿ ನೀಡಲಾಗುತ್ತದೆ. ಲೈಂಗಿಕ ವೃತ್ತಿಯಲ್ಲಿರುವ ಮಹಿಳೆಯರ ಸಮಸ್ಯೆಗಳ ಕುರಿತು ‘‍ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ದಂಧೆಯ ಒಡಲಾಳ’ ಲೇಖನಕ್ಕೆ ಈ ಪ್ರಶಸ್ತಿ ಲಭಿಸಿದೆ.

ಮಾನವೀಯ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನಕ್ಕೆ ನೀಡುವ ‘ಮೈಸೂರು ದಿಗಂತ ಪ್ರಶಸ್ತಿ’ಗೆ ಕೋಲಾರದ ‘ಕನ್ನಡ ತಿಲಕ’ ಪತ್ರಿಕೆಯಲ್ಲಿ ಕಲಾವಿದ ವಿಷ್ಣು ಬರೆದ ‘ಆಡು–ದನ ಆರ್ತಾಲಾಪ... ಮನುಷ್ಯರನ್ನು ಪ್ರೀತಿ ವಿಶ್ವಾಸದಿಂದ ಕಾಣಿ’ ಎಂಬ ಲೇಖನ ಆಯ್ಕೆಯಾಗಿದೆ. ಎರಡೂ ಪ್ರಶಸ್ತಿಗಳು ₹ 10,000 ನಗದು ಪುರಸ್ಕಾರ ಒಳಗೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry