ಸಿದ್ಧತೆಗೆ ವೆಬ್‌ನಲ್ಲಿದೆ ಮಾದರಿ ಪ್ರಶ್ನೆಗಳು

7

ಸಿದ್ಧತೆಗೆ ವೆಬ್‌ನಲ್ಲಿದೆ ಮಾದರಿ ಪ್ರಶ್ನೆಗಳು

Published:
Updated:
ಸಿದ್ಧತೆಗೆ ವೆಬ್‌ನಲ್ಲಿದೆ ಮಾದರಿ ಪ್ರಶ್ನೆಗಳು

ಬೆಂಗಳೂರು: ಪ್ರಜಾವಾಣಿ ರಸಪ್ರಶ್ನೆ ಸ್ಪರ್ಧೆಗೆ ದಿನಗಣನೆ ಆರಂಭವಾಗಿದೆ. ತಯಾರಿ ಹೇಗಿರಬೇಕು? ಎಂಥ ಪ್ರಶ್ನೆಗಳನ್ನು ಕೇಳಬಹುದು? ಉತ್ತರಿಸುವ ವೇಗ ಎಷ್ಟಿರಬೇಕು? ಇಂಥ ಆತಂಕಗಳು ಮೊದಲ ಸಲ ಪ್ರಯತ್ನಿಸುವ ಮಕ್ಕಳಿಗೆ ಇದ್ದೇ ಇರುತ್ತದೆ. ಕಳೆದ ವರ್ಷ ಈ ಸ್ಪರ್ಧೆಯಲ್ಲಿ ಭಾಗವಹಿಸಿದವರು ಈಗಾಗಲೇ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.

ಬಹಳಷ್ಟು ವಿದ್ಯಾರ್ಥಿಗಳು ಹಳೆಯ ಪತ್ರಿಕೆಗಳನ್ನು ತಿರುವಿಹಾಕುತ್ತಿದ್ದಾರೆ. ಪ್ರಶ್ನೆಗಳನ್ನು ಒಮ್ಮೆ ನೋಡಲು, ಓದಲು ‘ಪ್ರಜಾವಾಣಿ’ಯ ಹಳೆಯ ಪ್ರತಿಗಳನ್ನು ಕಾಪಿಟ್ಟುಕೊಂಡು ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.

‘ಪ್ರಜಾವಾಣಿ ಕ್ವಿಜ್‌’ಗೆ ಅನುಕೂಲವಾಗಲಿ ಎಂದು ಪ್ರಜಾವಾಣಿ ತನ್ನ ವೆಬ್‌ ಪುಟದಲ್ಲಿಯೂ ರಸಪ್ರಶ್ನೆಯನ್ನು ಆಯೋಜಿಸಿದೆ. ಇಲ್ಲಿನ ಪ್ರಜಾವಾಣಿ ಕ್ವಿಜ್‌ ಮೇಲೆ ಕ್ಲಿಕ್ಕಿಸಿ. ನಿಮ್ಮ ಹೆಸರು, ತರಗತಿ, ಶಾಲೆಗಳನ್ನು ನಮೂದಿಸಬೇಕು. ನಂತರ ಹತ್ತು ನಿಮಿಷಗಳಲ್ಲಿ 10 ಪ್ರಶ್ನೆಗಳಿಗೆ ಉತ್ತರ ನೀಡಬೇಕು.

ಎಲ್ಲ ಪ್ರಶ್ನೆಗಳಿಗೂ ಬಹು ಆಯ್ಕೆಯ ಉತ್ತರಗಳಿವೆ. ದೃಶ್ಯ ಸಂಬಂಧಿ ಪ್ರಶ್ನೆಗಳಿವೆ. ಈ ಪ್ರಶ್ನೆಗಳನ್ನು ಓದಿ, ಚಿತ್ರ ನೋಡಿದ ನಂತರ ನಿಮ್ಮ ಉತ್ತರವನ್ನು ಆಯ್ಕೆ ಮಾಡಬಹುದು. ಸರಿ ತಪ್ಪು ಉತ್ತರಗಳನ್ನು ಅಲ್ಲಿಯೇ ಮೌಲ್ಯಮಾಪನ ಮಾಡಲಾಗುತ್ತದೆ. ಅಂತಿಮ ಅಂಕಗಳನ್ನು ಪರದೆಯ ಮೇಲೆ ಪ್ರದರ್ಶಿಸಿದ ಮೇಲೆ, ಸರಿ ಉತ್ತರ ಮತ್ತು ತಪ್ಪು ಉತ್ತರಗಳನ್ನು ಒಟ್ಟೊಟ್ಟಿಗೆ ನೀಡಲಾಗುತ್ತದೆ.

ಈ ಪ್ರಶ್ನೆಗಳು ‘ಪ್ರಜಾವಾಣಿ ರಸಪ್ರಶ್ನೆ’ ಸ್ಪರ್ಧೆಯಲ್ಲಿ ಕೇಳಬಹುದಾದ ಮಾದರಿ ಪ್ರಶ್ನೆಗಳನ್ನು ಸೂಚಿಸುತ್ತವೆ. ಒಮ್ಮೆ ಯತ್ನಿಸಿ ನೋಡಿ.

www.prajavani.net

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry