ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನೋತ್ಸವ ಸ್ಮಾರಕ ಭವನ ಉದ್ಘಾಟನೆಗೆ ಸಜ್ಜು

ಕ.ಸಾ.ಪ: 22ರಂದು ಭವನ ಉದ್ಘಾಟಿಸಲಿರುವ ಮುಖ್ಯಮಂತ್ರಿ
Last Updated 2 ಜನವರಿ 2018, 20:05 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಸ್ಮಾರಕ ಭವನದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ 22ರಂದು ಉದ್ಘಾಟಿಸಲಿದ್ದಾರೆ.

ಪರಿಷತ್ತು ಶತಮಾನ ಪೂರೈಸಿದ ಸಂಭ್ರಮಾಚರಣೆ ಸಲುವಾಗಿ ಸರ್ಕಾರ ₹ 5 ಕೋಟಿ ಅನುದಾನ ನೀಡಿತ್ತು. ಪುಂಡಲೀಕ ಹಾಲಂಬಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 2014ರ ಜೂನ್‌ 17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದರು.

ಮತ್ತೊಮ್ಮೆ ಭೂಮಿ ಪೂಜೆ: ಶಂಕುಸ್ಥಾಪನೆ ನೆರವೇರಿಸಿ 2 ವರ್ಷ ಕಳೆದರೂ ಕಾಮಗಾರಿ ಪ್ರಾರಂಭವಾಗಿರಲಿಲ್ಲ. ಮನು ಬಳಿಗಾರ್‌ ಅವರು ಪರಿಷತ್ತಿನ ಅಧ್ಯಕ್ಷರಾದ ಬಳಿಕ 2016ರ ಮಾರ್ಚ್‌ನಲ್ಲಿ ಮತ್ತೆ ಭೂಮಿಪೂಜೆ ನೆರವೇರಿಸಿದರು. ಆ ಬಳಿಕ ಕಟ್ಟಡ ಕಾಮಗಾರಿ ಆರಂಭಿಸಲಾಯಿತು. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಪರಿಷತ್ತಿನ ಖಜಾಂಚಿ ಪಿ. ಮಲ್ಲಿಕಾರ್ಜುನಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ವಿವಿಧ ಜಿಲ್ಲೆಗಳಲ್ಲಿ ಏರ್ಪಡಿಸಿದ್ದ ಶತಮಾನೋತ್ಸವ ಸಂಭ್ರಮಾಚರಣೆಗೆ ₹ 1.5 ಕೋಟಿ ಹಾಗೂ ಕಟ್ಟಡ ನಿರ್ಮಾಣಕ್ಕೆ ₹ 4 ಕೋಟಿ ವೆಚ್ಚವಾಗಿದೆ. ಜಾಗ ಕಡಿಮೆ ಇದ್ದರೂ ಕಟ್ಟಡದ ಗುಣಮಟ್ಟ ಉತ್ತಮವಾಗಿದೆ ಎಂದು ಮನು ಬಳಿಗಾರ್‌ ತಿಳಿಸಿದರು.

ಕಟ್ಟಡದ ವಿಶೇಷತೆ: ಮೂರು ಅಂತಸ್ತಿನ ಈ ಭವನದ ನೆಲಮಹಡಿಯಲ್ಲಿ ಎರಡು ಕಚೇರಿಗಳಿವೆ. 2ನೇ ಅಂತಸ್ತಿನಲ್ಲಿ ಅತಿಥಿಗಳು ತಂಗಲು 6 ಕೊಠಡಿಗಳು ಹಾಗೂ 3ನೇ ಅಂತಸ್ತಿನಲ್ಲಿ 180 ಆಸನ ವ್ಯವಸ್ಥೆಯ ಸಭಾಭವನವಿದೆ.

‘ಪರಿಷತ್ತಿನಲ್ಲಿ ಮಹಿಳೆಯರ ಹೆಸರಿನಲ್ಲಿ ಒಂದೂ ಸಭಾಭವನವೂ ಇರಲಿಲ್ಲ. ಹೀಗಾಗಿ ಈ ಸಭಾಭವನಕ್ಕೆ ಅಕ್ಕಮಹಾದೇವಿ ಹೆಸರಿಟ್ಟಿದ್ದೇವೆ’ ಎಂದು ಬಳಿಗಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT