ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂದಲು ಉದ್ಯಮಿ ಬಳಿ ₹ 70 ಕೋಟಿ ಅಘೋಷಿತ ಆಸ್ತಿ

Last Updated 2 ಜನವರಿ 2018, 20:40 IST
ಅಕ್ಷರ ಗಾತ್ರ

ಬೆಂಗಳೂರು: ಕೊಪ್ಪಳದ ಕೂದಲು ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಶ್ರೀನಿವಾಸ ಗುಪ್ತ ಅವರ ಮನೆ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಆದಾಯ ತೆರಿಗೆ(ಐ.ಟಿ) ಇಲಾಖೆ ಅಧಿಕಾರಿಗಳು, ₹ 70 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆ ಮಾಡಿದ್ದಾರೆ.

₹ 65 ಕೋಟಿ ತೆರಿಗೆ ವಂಚನೆ ಮಾಡಿರುವ ದಾಖಲೆಗಳು ದೊರೆತಿದ್ದು, ₹ 2.5 ಕೋಟಿ  ನಗದು, ₹ 2.5 ಕೋಟಿ ಮೌಲ್ಯದ 140 ಕೆ.ಜಿ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಐ.ಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಐ.ಟಿ ಅಕಾರಿಗಳ ತಂಡ ಕೊಪ್ಪಳದ ಭಾಗ್ಯ ನಗರದಲ್ಲಿರುವ ಶ್ರೀನಿವಾಸ ಗುಪ್ತ ಅವರ ಮನೆ, ಕೂದಲು ಸಂಸ್ಕರಣಾ ಘಟಕ, ಆಂಧ್ರಪ್ರದೇಶದ ಏಲೂರಿನಲ್ಲಿರುವ ಘಟಕದ ಮೇಲೆ 2017ರ ಡಿಸೆಂಬರ್ 20ರಂದು ದಾಳಿ ನಡೆಸಿದ್ದರು.

ವಿದೇಶದಲ್ಲಿ ಬೇಡಿಕೆ:

ಉದ್ದನೆಯ ಕೂದಲಿಗೆ ವಿದೇಶಗಳಲ್ಲಿ ಬೇಡಿಕೆ ಇದ್ದು, ಕೆಲವು ಮಹಿಳಾ ವಿದ್ಯಾರ್ಥಿ ನಿಲಯಗಳಲ್ಲಿ ಮಹಿಳೆಯರು ಕೂದಲು ಮಾರಾಟ ಮಾಡುತ್ತಾರೆ. ಈ ಕೂದಲನ್ನು ಸಂಸ್ಕರಿಸಿ ಆಫ್ರಿಕಾ ಮತ್ತು ಯೂರೋಪ್‌ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದ್ದರು.

ಕೂದಲುಗಳ ಮಾರಾಟಕ್ಕೆ ಸಂಬಂಧಿಸಿದ ಲೆಕ್ಕಪತ್ರ ನಿರ್ವಹಣೆ ಮಾಡಿಲ್ಲ. ವಾರ್ಷಿಕ ತೆರಿಗೆ ಸಲ್ಲಿಕೆ ವೇಳೆ ಇದನ್ನು ಘೋಷಣೆ ಮಾಡಿರಲಿಲ್ಲ ಎಂದು ಐ.ಟಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT