ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಧಾರಿ ಫೇಸ್‌ಬುಕ್ ಗೆಳೆಯರ ಬಳಗದಿಂದ ಧನ ಸಹಾಯ

Last Updated 3 ಜನವರಿ 2018, 10:04 IST
ಅಕ್ಷರ ಗಾತ್ರ

ಭಟ್ಕಳ: ಸಾಮಾಜಿಕ ಜಾಲತಾಣಗಳಿಂದ ಯುವಜನರು ದಾರಿತಪ್ಪುತ್ತಿದ್ದಾರೆ ಎಂಬ ಮಾತಿಗೆ ಅಪವಾದವೆಂಬಂತೆ ಫೇಸ್‌ಬುಕ್‌ನಲ್ಲಿ ರಚಿಸಿಕೊಂಡಿರುವ ನಾಮಧಾರಿ ಗೆಳೆಯರ ಬಳಗದ ಸದಸ್ಯರು ಅಪಘಾತದಲ್ಲಿ ಕಾಲನ್ನು ಕಳೆದುಕೊಂಡ ಯುವಕನಿಗೆ ಧನಸಹಾಯ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಅಪಘಾತವೊಂದರಲ್ಲಿ ತನ್ನ ಕಾಲನ್ನು ಕಳೆದುಕೊಂಡಿದ್ದ ಕುಮಟಾದ ತಾರೀಬಾಗಿಲಿನ ನಿವಾಸಿ ಸುನೀಲ್ ಹನುಮಂತ ನಾಯ್ಕ ಮನೆಯಲ್ಲಿಯೆ ಹಾಸಿಗೆ ಹಿಡಿದಿದ್ದರು. ಈ ವಿಷಯ ತಿಳಿದ ಬಳಗದ ಸದಸ್ಯರು ಕುಮಟಾದ ಅವರ ನಿವಾಸಕ್ಕೆ ತೆರಳಿ ನೊಂದ ಕುಟುಂಬಕ್ಕೆ ಧನ ಸಹಾಯ ನೀಡಿ, ಆತ್ಮ ಸ್ಥೈರ್ಯ ತುಂಬಿದರು. ಮುಂದಿನ ಚಿಕಿತ್ಸೆಗೆ ಸಿಗಬಹುದಾದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬಿದರು.

ನಾಮಧಾರಿ ಗೆಳೆಯರ ಬಳಗದ ನಿರ್ವಾಹಕ ಪಾಂಡುರಂಗ ನಾಯ್ಕ, ಸದಸ್ಯರಾದ ಭವಾನಿಶಂಕರ ನಾಯ್ಕ ಹೆಬಳೆ, ದಿನೇಶ ನಾಯ್ಕ ಚೌಥನಿ, ವೆಂಕಟೇಶ ನಾಯ್ಕ ಕಡವಿನಕಟ್ಟೆ, ಕುಮಟಾದ ಸುಬ್ರಮಣ್ಯ ನಾಯ್ಕ, ಸುಕುಮಾರ ನಾಯ್ಕ, ಸಚಿನ್ ನಾಯ್ಕ, ಮಹೇಶ ನಾಯ್ಕ, ಅಣ್ಣಪ್ಪ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT