ಗೋವಾ: ಮಿಗ್‌ ಯುದ್ಧವಿಮಾನ ಅಪಘಾತ, ಪೈಲಟ್‌ ಪಾರು

7

ಗೋವಾ: ಮಿಗ್‌ ಯುದ್ಧವಿಮಾನ ಅಪಘಾತ, ಪೈಲಟ್‌ ಪಾರು

Published:
Updated:
ಗೋವಾ: ಮಿಗ್‌ ಯುದ್ಧವಿಮಾನ ಅಪಘಾತ, ಪೈಲಟ್‌ ಪಾರು

ಪಣಜಿ: ಭಾರತೀಯ ವಾಯುಪಡೆಗೆ ಸೇರಿದ ‘ಮಿಗ್ 29ಕೆ’ ಲಘು ಯುದ್ಧವಿಮಾನ ಗೋವಾ ವಾಯುನೆಲೆಯಲ್ಲಿ ಬುಧವಾರ ಅಪಘಾತಕ್ಕೀಡಾಗಿದೆ.

ಘಟನೆಯಲ್ಲಿ ಟ್ರೈನಿ ಪೈಲಟ್‌ ಸುರಕ್ಷಿತವಾಗಿದ್ದಾರೆ ಎಂದು ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಾಂತ್ರಿಕ ಕಾರಣದಿಂದ ರನ್‌ವೇನಲ್ಲಿ ಯುದ್ಧವಿಮಾನ ಅಡ್ಡಾದಿಡ್ಡಿ ಚಲಿಸಿ ಅಪಘಾತಕ್ಕೀಡಾಗಿದೆ.

ವಾಯುನೆಲೆಯಲ್ಲೇ ಗೋವಾ ವಿಮಾನ ನಿಲ್ದಾಣವಿದೆ. ಈ ‘ಘಟನೆಯಿಂದಾಗಿ ಹೊರಡುವ ಮತ್ತು ಆಗಮಿಸುವ ನಾಗರಿಕ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಯಿತು’ ಎಂದು ಗೋವಾ ವಿಮಾನ ನಿಲ್ದಾಣದ ನಿರ್ದೇಶಕ ಬಿ.ಸಿ.ಎಚ್.ನೇಗಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry