ವಿವಾಹ ಪ್ರಸ್ತಾಪವೂ ವೈರಲ್ ಆಯ್ತು

7

ವಿವಾಹ ಪ್ರಸ್ತಾಪವೂ ವೈರಲ್ ಆಯ್ತು

Published:
Updated:
ವಿವಾಹ ಪ್ರಸ್ತಾಪವೂ ವೈರಲ್ ಆಯ್ತು

ರಿಯಾಲಿಟಿ ಶೋಗಳ ಜನಪ್ರಿಯ ನಟಿ ಪಾರೀಸ್ ಹಿಲ್ಟನ್, ಬಹುಕಾಲದ ಗೆಳೆಯ ಕ್ರಿಸ್‌ ಝಿಲ್ಕಾರ ವಿವಾಹ ಪ್ರಸ್ತಾವವನ್ನು ಸಂಭ್ರಮದಿಂದ ಒಪ್ಪಿಕೊಂಡಿದ್ದಾರೆ. ಅಮೆರಿಕದ ಕೊಲೊರೊಡೊದಲ್ಲಿ ಜೊತೆಜೊತೆಗೆ ಖುಷಿಖುಷಿಯಾಗಿ ವೀಕ್‌ಎಂಡ್ ಕಳೆಯುತ್ತಿತ್ತು ಈ ಜೋಡಿ. ಈ ಸಂದರ್ಭ ಝಿಲ್ಕಾ ಕೈಲಿ ರಿಂಗ್‌ ಹಿಡಿದು ಮಂಡಿಯೂರಿ ಪಾರೀಸ್‌ಗೆ ಮದುವೆಯಾಗುವಂತೆ ಕೋರಿದರು.

ಖುಷಿಯಲ್ಲಿ ತುಸು ಶಾಕ್ ಆದಂತೆ ಕಂಡುಬಂದ ನಟಿ, ಸಾವರಿಸಿಕೊಂಡು ಇನಿಯನನ್ನು ಬಿಗಿದಪ್ಪಿ ಸಂಭ್ರಮಿಸಿದರು. ಈ ದೃಶ್ಯ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

‘ಅಯ್ಯೋ, ಅವನು ನನ್ನೆದುರು ಮಂಡಿಯೂರಿ ರಿಂಗ್‌ ಕೊಟ್ಟ. ಅವನು ನನ್ನ ಬೆಸ್ಟ್‌ ಫ್ರೆಂಡ್‌, ಆತ್ಮಸಖ. ನನಗೆ ಎಲ್ಲ ರೀತಿಯಲ್ಲೂ ಬೆಸ್ಟ್ ಅವನು. ನಾನು ಈ ಜಗತ್ತಿನಲ್ಲೇ ಅತಿ ಅದೃಷ್ಟವಂತೆ’ ಎನ್ನುವ ಒಕ್ಕಣೆಯೊಂದಿಗೆ ವಿಡಿಯೊ ಮತ್ತು ಚಿತ್ರಗಳನ್ನು ಶೇರ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ 36 ವರ್ಷದ ನಟಿ ಪಾರಿಸ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry