ತಾರಾ ಕೊಲೆ: ಆರೋಪಿ ತಪ್ಪೊಪ್ಪಿಗೆ

7

ತಾರಾ ಕೊಲೆ: ಆರೋಪಿ ತಪ್ಪೊಪ್ಪಿಗೆ

Published:
Updated:
ತಾರಾ ಕೊಲೆ: ಆರೋಪಿ ತಪ್ಪೊಪ್ಪಿಗೆ

ಬೆಂಗಳೂರು: ‘ಸಾಲ ಮರಳಿಸದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಹಾಗೂ ತನ್ನ ಜತೆಗೆ ಅಕ್ರಮ ಸಂಬಂಧ ಹೊಂದಿರುವ ವಿಚಾರವನ್ನು ಪತ್ನಿಗೆ ತಿಳಿಸುವುದಾಗಿ ತಾರಾ ಬೆದರಿಸಿದ್ದರಿಂದ ಅವರನ್ನು ಹತ್ಯೆಗೈದೆ..’

ತಾರಾ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಗೋಪಿನಾಥ್ (35), ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಗೆ ನೀಡಿರುವ ತಪ್ಪೊಪ್ಪಿಗೆ ಹೇಳಿಕೆ ಇದು.

‘ಆಕೆಯ ಪತಿ ಪ್ರಭುಕುಮಾರ್ ನನ್ನ ಸ್ನೇಹಿತ. 2016ರ ಜನವರಿಯಲ್ಲಿ ಮೊದಲ ಬಾರಿಗೆ ಅವರ ಮನೆಗೆ ಹೋಗಿದ್ದೆ. ಆಗ ಪತ್ನಿ–ಮಕ್ಕಳನ್ನು ಪರಿಚಯ ಮಾಡಿಕೊಟ್ಟಿದ್ದರು. ಕ್ರಮೇಣ ತಾರಾ ಜತೆ ಸಲುಗೆ ಬೆಳೆದು, ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಅವರಿಂದ₹ 11.8 ಲಕ್ಷ ಸಾಲವನ್ನೂ ಪಡೆದಿದ್ದೆ’ ಎಂದು ಆರೋಪಿ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry