ಬುಧವಾರ, ಜೂಲೈ 8, 2020
21 °C

ಪೊಲೀಸರ ಬೂಟು ನೆಕ್ಕುವಂತೆ ಬಲವಂತ: ದಲಿತ ವ್ಯಕ್ತಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌: ತಾವು ದಲಿತ ಎಂದು ಗೊತ್ತಾದ ಬಳಿಕ ಕನಿಷ್ಠ 15 ಪೊಲೀಸ್‌ ಅಧಿಕಾರಿಗಳ ಬೂಟು ನೆಕ್ಕುವಂತೆ ಬಲವಂತ ಮಾಡಲಾಗಿದೆ ಎಂದು ಗುಜರಾತಿನ ಹರ್ಷ ಜಾದವ್‌ ದೂರು ದಾಖಲಿಸಿದ್ದಾರೆ.

ಕಾನ್‌ಸ್ಟೆಬಲ್‌ ವಿನೋದ್‌ಭಾಯಿ ಬಾಬುಭಾಯಿ ಡಿಸೆಂಬರ್‌ 28ರಂದು ಯಾವುದೇ ಪ್ರಚೋದನೆ ಇಲ್ಲದೆ ತಮಗೆ ಬೆತ್ತದಿಂದ ಹೊಡೆದು ಬೆರಳು ಮುರಿದಿದ್ದಾರೆ. ತಮ್ಮ ಕುಟುಂಬದ ಸದಸ್ಯರನ್ನು ನಿಂದಿಸಿದ್ದಾರೆ. ಬಳಿಕ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ತಮ್ಮನ್ನು ಲಾಕಪ್‌ನಲ್ಲಿ ಕೂಡಿ ಹಾಕಲಾಯಿತು ಎಂದು ದೂರಿದ್ದಾರೆ.

‘ಜಾತಿ ಯಾವುದು ಎಂದು ಕೆಲವು ಅಧಿಕಾರಿಗಳು ಪ್ರಶ್ನಿಸಿದರು. ‘ದಲಿತ’ ಎಂದು ಹೇಳಿದಾಗ ವಿನೋದ್‌ಭಾಯಿ ಅವರ ಕಾಲುಮುಟ್ಟಿ ಕ್ಷಮೆ ಕೇಳಲು ಬಲ

ವಂತ ಮಾಡಿದರು. ಜಾದವ್‌ ಹಾಗೆಯೇ ಮಾಡಿದರು. ಬಳಿಕ, ಅಧಿಕಾರಿಗಳ ಬೂಟು ನೆಕ್ಕುವಂತೆ ಮಾಡಲಾಯಿತು ಎಂದು ದೂರಿನಲ್ಲಿ ‌ ಹೇಳಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿ ದೇಸಾಯಿ ಮಾಹಿತಿ ನೀಡಿದ್ದಾರೆ.

ಜಾದವ್‌ ದೂರು ನೀಡಿದ ಬಳಿಕ ವಿನೋದ್‌ಭಾಯಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಅಪರಾಧ ತನಿಖಾ ದಳವು ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ದೇಸಾಯಿ ಹೇಳಿದ್ದಾರೆ.

‘ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಜಾದವ್‌ರನ್ನು ಬಂಧಿಸಲಾಗಿತ್ತು. ಅವರನ್ನು ಡಿ. 29ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅಲ್ಲಿ ಈ ಬಗ್ಗೆ ಅವರು ಏನನ್ನೂ ಹೇಳಿರಲಿಲ್ಲ. ಡಿ. 30 ಅಥವಾ 31ರಂದೂ ಅವರು ದೂರು ನೀಡಲಿಲ್ಲ’ ಎಂದು ಡಿಸಿಪಿ ಗಿರೀಶ್‌ ಪಾಂಡ್ಯ ಹೇಳಿದ್ದಾರೆ.

ಜನರ ಗುಂಪೊಂದು ಪೊಲೀಸ್‌ ಠಾಣೆಗೆ ಸೋಮವಾರ ಮುತ್ತಿಗೆ ಹಾಕಿ ಕಾನ್‌ಸ್ಟೆಬಲ್‌ ವಿರುದ್ಧ ದೂರು ದಾಖಲಿಸುವಂತೆ ಒತ್ತಾಯಿಸಿತು. ಅದರಂತೆ ದೂರು ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪಾಂಡ್ಯ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.