ಸರ್ಕಾರದಿಂದ ಪರಿಷ್ಕೃತ ಉಳಿತಾಯ ಬಾಂಡ್‌: ವಾರ್ಷಿಕ ಶೇ 7.75 ಬಡ್ಡಿ, ಕನಿಷ್ಠ ₹100 ಮುಖಬೆಲೆಯ ಬಾಂಡ್‌

7

ಸರ್ಕಾರದಿಂದ ಪರಿಷ್ಕೃತ ಉಳಿತಾಯ ಬಾಂಡ್‌: ವಾರ್ಷಿಕ ಶೇ 7.75 ಬಡ್ಡಿ, ಕನಿಷ್ಠ ₹100 ಮುಖಬೆಲೆಯ ಬಾಂಡ್‌

Published:
Updated:
ಸರ್ಕಾರದಿಂದ ಪರಿಷ್ಕೃತ ಉಳಿತಾಯ ಬಾಂಡ್‌: ವಾರ್ಷಿಕ ಶೇ 7.75 ಬಡ್ಡಿ, ಕನಿಷ್ಠ ₹100 ಮುಖಬೆಲೆಯ ಬಾಂಡ್‌

ನವದೆಹಲಿ: ವಾರ್ಷಿಕ ಶೇ 7.75ರಷ್ಟು ಬಡ್ಡಿ ಪಡೆಯುವ ಪರಿಷ್ಕೃತ ಉಳಿತಾಯ ಬಾಂಡ್‌ಗಳನ್ನು ಬಿಡುಗಡೆ ಮಾಡುವುದಾಗಿ ಭಾರತ ಸರ್ಕಾರ ಗುರುವಾರ ಘೋಷಿಸಿದೆ. ಆರ್‌ಬಿಐ ಬಾಂಡ್ ಸ್ಕೀಮ್‌ ಎಂದೂ ಕರೆಯಲಾಗುತ್ತಿದ್ದ ಶೇ 8ರಷ್ಟು ಬಡ್ಡಿ ನೀಡುವ ಬಾಂಡ್‌ಗಳ ಬದಲಾಗಿ ಹೊಸ ಬಾಂಡ್‌ಗಳನ್ನು ಸರ್ಕಾರ ವಿತರಿಸಲಿದೆ.

ಜನವರಿ 10ರಿಂದ ಭಾರತದ ಪ್ರಜೆಗಳು ಬಾಂಡ್‌ಗಳ ಮೂಲಕ ಹೂಡಿಕೆ ಮಾಡಬಹುದಾಗಿದೆ. ಈ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಅನಿವಾಸಿ ಭಾರತೀಯರಿಗೆ ಅವಕಾಶವಿಲ್ಲ.

ಕನಿಷ್ಠ ₹100 ಹಾಗೂ ಗರಿಷ್ಠ ₹1000 ಮುಖಬೆಲೆಯ ಬಾಂಡ್‌ಗಳನ್ನು ವಿತರಿಸಲಾಗುತ್ತದೆ. ಈ ತೆರಿಗೆಯುಕ್ತ ಬಾಂಡ್‌ಗಳಲ್ಲಿ ಹೂಡಿಕೆಗೆ ಗರಿಷ್ಠ ಮಿತಿ ನಿಗದಿ ಪಡಿಸಿಲ್ಲ.

ಡಿಮಾಟ್‌ ರೂಪದಲ್ಲಿ ಬಾಂಡ್‌ಗಳ ವಿತರಣೆಯಾಗಲಿದ್ದು, ಏಳು ವರ್ಷದ ನಂತರ ಠೇವಣಿ ಹಣ ಪಡೆಯಬಹುದಾಗಿರುತ್ತದೆ. ವಾರ್ಷಿಕ ಶೇ 7.75ರಷ್ಟು ಬಡ್ಡಿ ನಿಗದಿ ಪಡಿಸಲಾಗಿದೆ ಹಾಗೂ ಆರು ತಿಂಗಳಿಗೆ ಒಮ್ಮೆ ಬಡ್ಡಿ ಖಾತೆಗೆ ಜಮೆಯಾಗುತ್ತದೆ ಎಂದು ವಿತ್ತ ಸಚಿವಾಲಯ ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.

₹1000 ಬಾಂಡ್‌ನಲ್ಲಿ ಹಣ ಹೂಡಿದರೆ ಏಳು ವರ್ಷಗಳಲ್ಲಿ ಬಡ್ಡಿ ಸೇರಿ ಪಡೆಯುವ ಹಣ ₹1,703 ಆಗಿರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry