ಬುಧವಾರ, ಆಗಸ್ಟ್ 5, 2020
21 °C

‘ಕಂತ್ರಿ ಬಾಯ್ಸ್’ಗೆ ‘ಎ’ ಪ್ರಮಾಣಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಂ.ಸಿ. ಹೇಮಂತ್‍ ಗೌಡ ನಿರ್ಮಿಸುತ್ತಿರುವ, ಗಡ್ಡಪ್ಪ ಅಭಿನಯದ ‘ಕಂತ್ರಿ ಬಾಯ್ಸ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ‘ಎ’ ಪ್ರಮಾಣಪತ್ರ ನೀಡಿದೆ. ಥ್ರಿಲ್ಲರ್, ಕೊಲೆಯ ರಹಸ್ಯ ಮತ್ತು ಹಾಸ್ಯ ಈ ಚಿತ್ರದಲ್ಲಿರುವ ಪ್ರಧಾನ ಅಂಶಗಳು ಎಂದು ಸಿನಿತಂಡ ಹೇಳಿದೆ. ಚಿತ್ರವನ್ನು ಫೆಬ್ರುವರಿಯಲ್ಲಿ ತೆರೆಗೆ ತರುವುದು ತಂಡದ ಉದ್ದೇಶ.

ಚಿತ್ರದ ನಿರ್ದೇಶನ ಎಸ್. ರಾಜು ಚಟ್ನಳ್ಳಿ ಅವರದ್ದು. ಪಿ.ವಿ.ಆರ್. ಸ್ವಾಮಿ ಛಾಯಾಗ್ರಹಣ, ಕಿರಣ್ ಮಹಾದೇವ್ ಸಂಗೀತ ಚಿತ್ರಕ್ಕಿದೆ. ಅರವಿಂದ್, ಜೋಕರ್ ಹನುಮಂತು, ಹೇಮಂತ್‍ ಗೌಡ, ಅನಖ ಮುಂತಾದವರು ತಾರಾಬಳಗದಲ್ಲಿ ಇದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.