ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ಯೋಗಾಸನ ಪ್ರದರ್ಶನ

Last Updated 4 ಜನವರಿ 2018, 11:43 IST
ಅಕ್ಷರ ಗಾತ್ರ

ಗಂಗಾವತಿ: ಚನ್ನಬಸವ ಶಿವಯೋಗಿಗಳ ಮಹಾ ಸ್ಮರಣೋತ್ಸವದ ಅಂಗವಾಗಿ ಇಲ್ಲಿನ ಮಲ್ಲಿಕಾರ್ಜುನ ಮಠದಲ್ಲಿರುವ ಚನ್ನಬಸವ ಶಿವಯೋಗಿಗಳ ಪುರಾಣ ಮಂಟಪದ ಸಭಾಭವನದಲ್ಲಿ ನಗರದ ಮಹಾನ್ ಕಿಡ್ಸ್ ಶಾಲೆಯ ಮಕ್ಕಳು ಮಂಗಳವಾರ ಯೋಗಾಸನಗಳ ಪ್ರದರ್ಶನ ಮಾಡಿದರು.

ಎಲ್‌ಕೆಜಿಯಿಂದ ನಾಲ್ಕನೇ ತರಗತಿವರೆಗಿನ 14 ಮಕ್ಕಳು ಯೋಗಾಸನದ ತಾಡಾಸನ, ಚಕ್ರಾಸಾನ, ಶಲಬಾಸಾನ, ಮಯೂರಾಸನ, ಅಧೋಮುಖಾಸನ, ನಟರಾಜಾಸನ, ಅರ್ಧಚಂದ್ರಾಸನ, ಉಷ್ಟ್ರಾಸನ, ಕಚಾಸನ, ಏಕಪಾದಾಸನ ಹೀಗೆ 50ಕ್ಕೂ ಹೆಚ್ಚು ಆಸನಗಳನ್ನು ಪ್ರದರ್ಶಿಸಿ ಗಮನ ಸೆಳೆದರು.

‘ಇನ್ನೊಬ್ಬರ ಸಹಾಯವಿಲ್ಲದೇ ಚಕ್ರಾಸನ ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಆದರೆ ಮಕ್ಕಳು ಕಳೆದ ಒಂದೂವರೆ ತಿಂಗಳಿಂದ ನಿರಂತರ ಅಭ್ಯಾಸ ಮಾಡಿದ್ದರ ಪರಿಣಾಮ ಸ್ವತಂತ್ರವಾಗಿ ಚಕ್ರಾಸನ ಮಾಡಲು ಸಾಧ್ಯವಾಗಿದೆ’ ಎಂದು ಮಹಾನ್ ಕಿಡ್ ಶಾಲೆಯ ಮುಖ್ಯಸ್ಥ ನೇತ್ರಾಜ್ ಹಿರೇಮಠ ಹೇಳಿದರು.

‘ಪ್ರತಿ ವರ್ಷ ತಾತನ ಜಾತ್ರೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಾತ್ರ ವೇದಿಕೆ ಬಳಕೆಯಾಗುತಿತ್ತು. ಆದರೆ ಮೊದಲ ಬಾರಿಗೆ ಯೋಗಕ್ಕೆ ಅವಕಾಶ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ವಿಭಿನ್ನ ಪ್ರದರ್ಶನಕ್ಕೆ ಅವಕಾಶ ನೀಡಬೇಕು’ ಎಂದು ಭಕ್ತ ಮಂಜುನಾಥ ಚಿತ್ರಗಾರ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT