ಮತದಾರರ ಗುರುತಿನ ಚೀಟಿ ವ್ಯವಸ್ಥೆಗೆ ಟ್ರಂಪ್ ಒಲವು

7

ಮತದಾರರ ಗುರುತಿನ ಚೀಟಿ ವ್ಯವಸ್ಥೆಗೆ ಟ್ರಂಪ್ ಒಲವು

Published:
Updated:
ಮತದಾರರ ಗುರುತಿನ ಚೀಟಿ ವ್ಯವಸ್ಥೆಗೆ ಟ್ರಂಪ್ ಒಲವು

ವಾಷಿಂಗ್ಟನ್: ಚುನಾವಣೆಯಲ್ಲಿ ಮತದಾರರ ಗುರುತಿನ ವ್ಯವಸ್ಥೆ (ವೋಟರ್ ಐಡಿ) ಜಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಲವು ವ್ಯಕ್ತಪಡಿಸಿದ್ದಾರೆ.

‘ಅಮೆರಿಕನ್ನರಾಗಿ ನಿಮಗೆ ಗುರುತಿನ ಅಗತ್ಯವಿದೆ. ಅದು ನಿಖರ ರೂಪದಲ್ಲಿ ಇರಬೇಕು. ನೀವು ಮತ ಚಲಾಯಿಸುತ್ತೀರಿ ಎಂದರೆ ನೀವೇ ದೇಶವನ್ನು ಮುನ್ನಡೆಸಿದಂತೆ. ಮತದಾನ ವ್ಯವಸ್ಥೆಯಲ್ಲಿ ಲೋಪಗಳಿವೆ. ಹೀಗಾಗಿ ಮತದಾರರ ಗುರುತಿನ ಚೀಟಿ ಅಗತ್ಯ’ ಎಂದು ಅವರು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

ಮತದಾನ ವಂಚನೆ ಪ್ರಕರಣಗಳ ತನಿಖೆಗೆ ಉಪಾಧ್ಯಕ್ಷ ಮೈಕ್ ಪೆನ್ಸ್ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯನ್ನು ರದ್ದುಗೊಳಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ ಮರುದಿನವೇ ಟ್ರಂಪ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮಿತಿಯನ್ನು ಡೆಮಾಕ್ರಟಿಕ್ ಪಕ್ಷದ ಸಂಸದರು ವಿರೋಧಿಸಿದ್ದರು. ತನಿಖೆಗೆ ಸಹಕರಿಸದ ವಿರೋಧ ಪಕ್ಷವನ್ನು ಟ್ರಂಪ್ ಟೀಕಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry