ಪೆರು: ಪ್ರಪಾತಕ್ಕೆ ಬಿದ್ದ ಬಸ್‌–51 ಮಂದಿ ಸಾವು

7

ಪೆರು: ಪ್ರಪಾತಕ್ಕೆ ಬಿದ್ದ ಬಸ್‌–51 ಮಂದಿ ಸಾವು

Published:
Updated:
ಪೆರು: ಪ್ರಪಾತಕ್ಕೆ ಬಿದ್ದ ಬಸ್‌–51 ಮಂದಿ ಸಾವು

ಲಿಮಾ: ಮಂಗಳವಾರ ಪ್ರಪಾತಕ್ಕೆ ಬಿದ್ದ ಬಸ್‌ನ ಅವಶೇಷಗಳನ್ನು ಗುರುವಾರ ಹೊರತೆಗೆಯಲಾಗಿದ್ದು, ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 51ಕ್ಕೇರಿದೆ. ದೇಶದ ಇತಿಹಾಸದಲ್ಲೇ ಇದೊಂದು ಭೀಕರ ಅಪಘಾತ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೆರುವಿನ ಹೆದ್ದಾರಿಯ ಡೆವಿಲ್ಸ್ ಕರ್ವ್ ಎಂದು ಕರೆಯುವ ಕಿರಿದಾದ ಜಾಗದಲ್ಲಿ ಟ್ರಾಕ್ಟರ್ ಮತ್ತು ಬಸ್‌ ನಡುವೆ ಈ ಮಂಗಳವಾರ ಅಪಘಾತ ಸಂಭವಿಸಿತ್ತು. ಹುವಾಚೋದಿಂದ ಬಸ್‌ ಹೊರಟಿತ್ತು. ಅಗ್ನಿಶಾಮಕ ಸಿಬ್ಬಂಧಿ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ, ಮೃತದೇಹಗಳನ್ನು ಹಗ್ಗಗಳಿಂದ ಎಳೆದು ಹೊರತೆಗೆದಿದ್ದಾರೆ.

'ಅಪಘಾತದ ವೇಳೆ ಕಿಟಕಿಯಿಂದ ಹಾರಿ ಆರು ಮಂದಿ ಬದುಕುಳಿದಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳುಗಳ ಆರೋಗ್ಯ ಸ್ಥಿರವಾಗಿದ್ದು, ಇಬ್ಬರಿಗೆ ಕೈಭಾಗದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಛಾಂಕಯ್‌ ಆಸ್ಪತ್ರೆ ನಿರ್ದೇಶಕ ಡಾ.ವಿಕ್ಟರ್‌ ವಿರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry