ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀತ ಮಾರುತ: ಫ್ಲಾರಿಡಾದಲ್ಲಿ ಭಾರಿ ಹಿಮಪಾತ

Last Updated 4 ಜನವರಿ 2018, 19:30 IST
ಅಕ್ಷರ ಗಾತ್ರ

ಮಿಯಾಮಿ: ಅಮೆರಿಕದ ಪೂರ್ವ ಕರಾವಳಿಯಲ್ಲಿ ಶೀತ ಮಾರುತ ಬೀಸುತ್ತಿದ್ದು, ಫ್ಲಾರಿಡಾದಲ್ಲಿ ಭಾರೀ ಹಿಮಪಾತವಾಗಿದೆ.

‘ಮೂರು ದಶಕಗಳಲ್ಲೇ ಇಂತಹ ಹಿಮಪಾತವನ್ನು ನೋಡಿಲ್ಲ’ ಎಂದು ಫ್ಲಾರಿಡಾ ನಿವಾಸಿಗಳು ಹೇಳಿದ್ದಾರೆ.

ಶೀತಮಾರುತದ ಪರಿಣಾಮ ಇಲ್ಲಿ ಭಾರಿ ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು.

ಫ್ಲಾರಿಡಾದ ರಾಜಧಾನಿ ತಲ್ಲಾಹಸ್ಸಿಯಲ್ಲಿ ಬುಧವಾರ 0.1 ಇಂಚಿನಷ್ಟು ಹಿಮ ಸುರಿದಿತ್ತು. 1989 ಬಳಿಕ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಹಿಮಪಾತವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ತಲ್ಲಾಹಸ್ಸಿಯಲ್ಲಿ ಕೆಲ ದಿನಗಳ ಕಾಲ ರಾತ್ರಿ ವೇಳೆ ಉಷ್ಣಾಂಶ ಇನ್ನಷ್ಟು ಇಳಿಕೆಯಾಗಲಿದೆ ಎಂದೂ ತಿಳಿಸಿದೆ.

ಶೀತ ಮಾರುತದಿಂದಾಗಿ ಫ್ಲಾರಿಡಾದ ರಸ್ತೆಗಳಲ್ಲಿ ಹಿಮ ಸಂಗ್ರಹಗೊಂಡಿದೆ. ಶೀತ ಹವೆ ಎದುರಿಸಲು ಜನರು ಸನ್ನದ್ಧರಾಗುವಂತೆ ಅಲ್ಲಿನ ಗವರ್ನರ್‌ ರಿಕ್‌ ಸ್ಕಾಟ್‌ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT