ಕುಸ್ತಿ: ಶರತ್‌, ಸಂಜೀವ್‌ಗೆ ಕಂಚು

7

ಕುಸ್ತಿ: ಶರತ್‌, ಸಂಜೀವ್‌ಗೆ ಕಂಚು

Published:
Updated:
ಕುಸ್ತಿ: ಶರತ್‌, ಸಂಜೀವ್‌ಗೆ ಕಂಚು

ದಾವಣಗೆರೆ: ದಾವಣಗೆರೆ ಕ್ರೀಡಾ ನಿಲಯದ ಕುಸ್ತಿಪಟುಗಳಾದ ಶರತ್‌ ಎಸ್‌.ಎನ್‌. ಮತ್ತು ಬಿ. ಸಂಜೀವ ಅವರು ನವದೆಹಲಿಯಲ್ಲಿ ರಾಷ್ಟ್ರೀಯ ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ (ಎಸ್‌ಜಿಎಫ್‌ಐ) ಆಶ್ರಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಾಲಾ ಕುಸ್ತಿ ಸ್ಪರ್ಧೆಗಳ 14 ವರ್ಷದೊಳಗಿನವರ ವಿಭಾಗದಲ್ಲಿ ಗುರುವಾರ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಶರತ್‌ 38 ಕೆ.ಜಿ. ವಿಭಾಗದಲ್ಲಿ ಮತ್ತು ಸಂಜೀವ್ ಬಿ. 35 ಕೆ.ಜಿ. ವಿಭಾಗದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ ಎಂದು ಕುಸ್ತಿ ತರಬೇತುದಾರ ಆರ್.ಶಿವಾನಂದ ‘ಪ್ರಜಾವಾಣಿ’ಗೆ ತಿಳಿಸಿದರು. ಈ ಇಬ್ಬರು ಕುಸ್ತಿಪಟುಗಳು ಭದ್ರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry