ಪಾಕ್‌ನ ಎರಡು ಠಾಣೆ ಧ್ವಂಸ

7

ಪಾಕ್‌ನ ಎರಡು ಠಾಣೆ ಧ್ವಂಸ

Published:
Updated:
ಪಾಕ್‌ನ ಎರಡು ಠಾಣೆ ಧ್ವಂಸ

ಜಮ್ಮು: ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಪ್ರತಿದಾಳಿ ನಡೆಸಿರುವ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಯೋಧರು ಅಂತರರಾಷ್ಟ್ರೀಯ ಗಡಿಯಲ್ಲಿ ಒಬ್ಬ ನುಸುಳುಕೋರನನ್ನು ಗುಂಡಿಟ್ಟು ಕೊಂದಿದ್ದಾರೆ. ಅಲ್ಲದೆ, ಪಾಕ್‌ನ ಎರಡು ಠಾಣೆಗಳನ್ನು ಧ್ವಂಸಗೊಳಿಸಿದ್ದಾರೆ.

‘ಬುಧವಾರ ರಾತ್ರಿಯೇ ಪಾಕ್‌ನ ಎರಡು ಠಾಣೆಗಳನ್ನು ಗುರುತಿಸಿ ಧ್ವಂಸಗೊಳಿಸಲಾಯಿತು’ ಎಂದು ಬಿಎಸ್‌ಎಫ್‌ ವಕ್ತಾರರು ತಿಳಿಸಿದ್ದಾರೆ.

‘ಗುರುವಾರ ಅರ್ನಿಯಾ ವಲಯದ ನಿಕೋವಾಲ್‌ ಗಡಿ ಠಾಣೆ ವ್ಯಾಪ್ತಿಯಲ್ಲಿ ಮೂವರು ನುಸುಳುಕೋರರ ಚಲನವಲನ  ಗಮನಿಸಿದ ಪಡೆಗಳು, ಗುಂಡಿನ ದಾಳಿ ನಡೆಸಿವೆ. ಒಬ್ಬ ಮೃತಪಟ್ಟಿದ್ದು, ಉಳಿದವರು ಪರಾರಿಯಾಗಿದ್ದಾರೆ’ ಎಂದು ಬಿಎಸ್‌ಎಫ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry